ಪುತ್ತೂರು: ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುವ ಸಮಾಜ ಸೇವಾ ಕಾರ್ಯಗಳಲ್ಲಿ ಒಂದಾಗಿರುವ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕರ ಗುರುತಿನ ಚೀಟಿಯನ್ನು ವಿತರಿಸುವ ಕಾರ್ಯಕ್ರಮ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ನಡೆಯಿತು.
ಕಾರ್ಮಿಕರ ಗುರುತಿನ ಚೀಟಿ ಮಾಡಿಸಲು ತಗಲುವ ಶುಲ್ಕವನ್ನು ಕಾರ್ಮಿಕರಿಂದ ಪಡೆಯದೆ ಟ್ರಸ್ಟ್ ನ ಪ್ರವರ್ತಕರಾದ ಅಶೋಕ್ ಕುಮಾರ್ ರೈ ಪಾವತಿಸಿ ಉಚಿತವಾಗಿ ಮಾಡಿಕೊಟ್ಟರು.
ಗುರುತಿನ ಚೀಟಿಯನ್ನು ವಿತರಿಸಿ ಮಾತನಾಡಿದ ಟ್ರಸ್ಟ್ ನ ಪ್ರವರ್ತಕರಾದ ಅಶೋಕ್ ಕುಮಾರ್ ರೈ, ಟ್ರಸ್ಟ್ ನ ಮೂಲಕ ಇದುವರೆಗೆ ಸುಮಾರು 3625 ಮಂದಿ ಕಾರ್ಮಿಕರಿಗೆ ಈಗಾಗಲೇ ಉಚಿತವಾಗಿ ಗುರುತಿನ ಚೀಟಿಯನ್ನು ಮಾಡಿಕೊಡಲಾಗಿದೆ ಮತ್ತು ಮೂರು ವರ್ಷಕ್ಕೊಮ್ಮೆ ನವೀಕರಣ ಮಾಡಬೇಕಾಗುತ್ತದೆ ಅದನ್ನು ಕೂಡ ಟ್ರಸ್ಟ್ ನಮುಖಾಂತರ ಉಚಿತವಾಗಿ ಮಾಡಿಕೋಡಲಾಗುವುದು , ಅಲ್ಲದೆ ಕಾರ್ಮಿಕರಿಗೆ ಸರಕಾರದಿಂದ ಹಲವಾರು ಸೌಲಭ್ಯಗಳ ಯೋಜನೆಗಳಿವೆ ವಿದ್ಯಾರ್ಥಿ ವೇತನ , ಮದುವೆ, ಅನಾರೋಗ್ಯದ ಚಿಕಿತ್ಸೆ, ಪಿಂಚಣಿ ಸೌಲಭ್ಯ ಇದ್ದು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ 18 ಕಟ್ಟಡ ಕಾರ್ಮಿಕರಿಗೆ ಕಾರ್ಮಿಕರ ಗುರುತಿನ ಚೀಟಿ ಯನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಟ್ರಸ್ಟ್ ಸಿಬ್ಬಂದಿ ಲಿಂಗಪ್ಪ ಕುದ್ಮಾನು ನಿರೂಪಿಸಿ, ಸ್ವಾಗತಿಸಿದರು. ಪ್ರವೀಣ್ ಬನ್ನೂರು ಸಹಕರಿಸಿದರು.