ಪುತ್ತೂರು: ಕಳೆದ 15 ವರ್ಷಗಳಿಂದ ಉಮ್ರ ಮತ್ತು ಹಜ್ ಯಾತ್ರೆಯನ್ನು ಕೈಗೊಳ್ಳುವ ಮೂಲಕ ಯಾತ್ರಾರ್ಥಿಗಳ ವಿಶ್ವಾಸಾರ್ಹ ಸಂಸ್ಥೆಯಾದ “ಗಲ್ಫ್ ಟೂರ್ಸ್ &ಟ್ರಾವೆಲ್ಸ್” ನ ಎರಡನೇ ಶಾಖೆಯು ಪುತ್ತೂರಿನ ಕೆ.ಎಸ್.ಆರ್.ಟಿ. ಸಿ. ಹಿಂದೂಸ್ತಾನ್ ಕಾಂಪ್ಲೆಕ್ಸ್ ನಲ್ಲಿ ಡಿ.2 ರಂದು ಶುಭಾರಂಭಗೊಳ್ಳಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಮುದ್ರರಿಸ್ ಅಸ್ಸಯ್ಯದ್ ಅಹ್ಮದ್ ಪೊಕೋಯ ತಂಗಳ್ ನೆರವೇರಿಸಲಿದ್ದಾರೆ, ಓಲೆಮುಂಡೋವು ಉಸ್ತಾದ್ ಮಹ್ಮದುಲ್ ಫೈಝಿ ದುಃಆ ನಡೆಸಲಿದ್ದಾರೆ.
ವಿಮಾನ, ರೈಲು, ಬಸ್ ಟಿಕೆಟ್ ಬುಕ್ಕಿಂಗ್, ಹೊಸ ಪಾಸ್ ಪೋರ್ಟ್, ನವೀಕರಣ ತಿದ್ದುಪಡಿ, ಫಾರಿನ್ ಕರೆನ್ಸಿ ಎಕ್ಸ್ ಚೇಂಜ್, ಹಜ್ ಮತ್ತು ಉಮ್ರ ಯಾತ್ರೆ ಕೈಗೊಳ್ಳುವವರಿಗೆ ಪೂರ್ಣ ಮಾಹಿತಿ ಮತ್ತು ಸೇವೆ ಹಾಗೂ ಇನ್ನಿತರ ಪವಿತ್ರ ಸ್ಥಳಗಳ ಝಿಯಾರತ್ ಯಾತ್ರೆ ನಡೆಸಿಕೊಡಲಾಗುವುದು ಎಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.