ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಪ್ರಯುಕ್ತ ಪಂಚಶ್ರೀ ಗ್ರೂಪ್(ರಿ.) ರವರ ಯಶಸ್ವಿ 12ನೇ ವರ್ಷದ ಕಲಾ ಕಾಣಿಕೆ ‘ಸ್ಟಾರ್ ನೈಟ್’ ಕಲರ್ ಫುಲ್ ಮ್ಯೂಸಿಕಲ್ ಇವೆಂಟ್ ಕಾರ್ಯಕ್ರಮವು ಜ.22 ರಂದು ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಯುವ ಉದ್ಯಮಿ, ಎಂ.ಆರ್. ಗ್ರೂಪ್ಸ್ ನ ಮಾಲಕ ಮನ್ಮಿತ್ ರೈ ರವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪದಕ ವಿಜೇತರಾದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಪ್ರವೀಣ್ ರೈ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಬಿಜೆಪಿ ಮುಖಂಡರಾದ ಮಾಧವ ಮಾವೆ,ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್ ಸಿ.ಎಚ್., ಸಂಜೀವ ಪೂಜಾರಿ, ವನಸ್ತಾ ಆಗ್ರೋ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕರಾದ ನಟರಾಜ್ ಕಲ್ಯಾಣಿ, ವನಸ್ತಾ ಆಗ್ರೋ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾದ, ಟೈಮ್ ಅಂಡ್ ಟೈಡ್ ನ ಸುರೇಶ್ ರಾವ್ ಕೊಕ್ಕಡ, ಪಂಚಶ್ರೀ ಗ್ರೂಪ್ ನ ಶರತ್ ಎನ್.ಎಸ್., ಪ್ರವೀಣ್ ಸಿ. ಎಚ್., ಬ್ರಿಜೇಶ್ ವಿಟ್ಲ, ಶ್ರೀಹರಿ ಹಾಗೂ ಪಂಚಶ್ರೀ ಗ್ರೂಪ್ ನ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಣ್ಯ ಕಲಾವಿದರು ಭಾಗವಹಿಸಿದ್ದರು. ಕೋವಿಡ್ ನಿಯಮಾನುಸಾರವಾಗಿ ಕಾರ್ಯಕ್ರಮ ನೆರವೇರಿತು.