ವಿಟ್ಲ: ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು, ಶ್ರೀ ಕಾರಿಂಜೇಶ್ವರ ಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ಪರಮಪೂಜ್ಯ ಯತಿವರೇಣ್ಯರ ಆಶೀರ್ವಾದಗಳೊಂದಿಗೆ ಮೂರನೇ ಹಂತದ ಹೋರಾಟ ಗ್ರಾಮ ಗ್ರಾಮಗಳ ಮನೆ ಮನೆಗಳಿಗೆ “ಮನೆ ಸಂಪರ್ಕ ಜನಜಾಗರಣ ಅಭಿಯಾನ” ಅಂಗವಾಗಿ ವಿಟ್ಲ ಪೇಟೆಯಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಿತು.
ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ರವರ ಸಹಿ ಪಡೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.