ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿ ಪ್ರಧಾನ ಕಚೇರಿಯ ಮೇಲೆ ಅಪರಿಚಿತರು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ಇಂದು ಗುರುವಾರ ಬೆಳಗಿನ ಜಾವ ಭಾರತೀಯ ಜನತಾ ಪಕ್ಷದ ಕಚೇರಿ ಮೇಲೆ ಈ ದಾಳಿ ನಡೆದಿದೆ.
ತಮಿಳುನಾಡು ಬಿಜೆಪಿ ಕೇಂದ್ರ ಕಚೇರಿ ಕಮಲಾಲಯಂ ಮೇಲೆ ಈ ದಾಳಿ ನಡೆದಿದೆ. ಟಿ. ನಗರ್ ಏರಿಯಾದಲ್ಲಿ ಈ ಬಿಜೆಪಿ ಕಚೇರಿಯಿದ್ದು, ಘಟನೆಯು ಮುಖ್ಯಮಂತ್ರಿ ಸ್ಟ್ಯಾಲಿನ್ ಅಧಿಕೃತ ಕಚೇರಿಯಿಂದ 2 ಕಿಮೀ ದೂರದಲ್ಲಿದೆ. ANI ಸುದ್ದಿ ಸಂಸ್ಥೆ ಈ ಕುರಿತು ಟ್ವೀಟ್ ಮಾಡಿದೆ.
15 ವರ್ಷಗಳ ಹಿಂದೆಯೂ ಡಿಎಂಕೆ ಆಡಳಿತದಲ್ಲಿದ್ದಾಗ ಇಂತಹುದೇ ಘಟನೆ ನಡೆದಿತ್ತು:
ಮಧ್ಯರಾತ್ರಿ 1.30 ರ ವೇಳೆ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ. 15 ವರ್ಷಗಳ ಹಿಂದೆ ಇದೇ ಡಿಎಂಕೆ ಪಕ್ಷ ರಾಜ್ಯದಲ್ಲಿ ಆಡಳಿತದಲ್ಲಿದ್ದಾಗ ಇದೇ ಕಮಲಾಲಯಂ ಕಚೇರಿ ಮೇಲೆ ಇಂತಹುದೇ ದಾಳಿ ನಡೆದಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರವನ್ನು ನಾವು ಖಂಡಿಸುತ್ತೇವೆ. ಬಿಜೆಪಿ ಕಾರ್ಯಕರ್ತರು ಇಂತಹ ಘಟನೆಗಳಿಂದ ಎದೆಗುಂದುವುದಿಲ್ಲ. ಪೊಲೀಸರಿಗೂ ಈ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ ಎಂದು ಬಿಜೆಪಿ ನಾಯಕ ಕರಾಟೆ ತ್ಯಾಗರಾಜನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.