‘ಈರೆನ ಇಲ್ಲಗ್’ ಎಂಬ ಆನ್ಲೈನ್ ವೆಬ್ಸೈಟ್ ಮತ್ತು ಮೊಬೈಲ್ ಆಪ್ ಶೀಘ್ರದಲ್ಲಿ ತುಳುನಾಡ ಮಡಿಲನ್ನು ಸೇರಲಿದೆ.
ಈ ವೆಬ್‌ಸೈಟ್ ಕರಾವಳಿ ಕರ್ನಾಟಕ ಹಾಗೂ ಕಾಸರಗೋಡಿನ ಸಣ್ಣ ವ್ಯಾಪಾರಿಗಳಿಗೆ ಆನ್ಲೈನ್ ವ್ಯಾಪಾರ ಮಾಡಲು ಅವಕಾಶವನ್ನು ಒದಗಿಸುತ್ತದೆ, ಅಲ್ಲದೆ ಇತರ ಅಂತಾರಾಷ್ಟ್ರೀಯ ಆನ್‌ಲೈನ್ ಸಂಸ್ಥೆಗಳೊಂದಿಗೆ ಸ್ಪರ್ಧಿಸಲು ಅವಕಾಶವನ್ನು ನೀಡುತ್ತದೆ.
ತುಳುನಾಡಿನ ಮಣ್ಣಿನ ಈ ಸಂಸ್ಥೆಯು ಕರಾವಳಿ ಕರ್ನಾಟಕ, ಗಡಿನಾಡು ಕಾಸರಗೋಡಿನ ಪ್ರದೇಶದ ಜನರ ಸೇವೆ ಪೂರೈಸುವ ಸಂಕಲ್ಪ ಹೊಂದಿದೆ. ತುಳುನಾಡಿನ ಜನರಿಗೆ ಆನ್‌ಲೈನ್ ಸೇವೆಯನ್ನು ಒದಗಿಸುವ ಭರವಸೆ ನೀಡಿದೆ. ನಮ್ಮ ತುಳುನಾಡಿನ ಸಂಸ್ಕೃತಿಗೆ ತಕ್ಕಂತೆ ವಿಶಿಷ್ಟವಾದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ.
ಬದಲಾಗುತ್ತಿರುವ ಕಾಲಘಟ್ಟದಲ್ಲಿ, ಇಂದಿನ ಜನರ ಬೇಡಿಕೆ ಅರಿತಿರುವ ಈ ಸಂಸ್ಥೆ ದೇಶಿಯ ವಸ್ತುಗಳು ಹಾಗೂ ಸ್ಥಳೀಯ ಮಾರಾಟಗಾರನ ಕೈ ಹಿಡಿಯಲಿದ್ದು, ಜನರ ಮನೆ ಮನೆಗೆ ಉತ್ತಮ ಗುಣ ಮಟ್ಟದ ವಸ್ತುಗಳನ್ನು ಯಾವುದೇ ಲೋಪವಿಲ್ಲದೆ ತಲುಪಿಸಲು ಪಣ ತೊಟ್ಟಿದೆ. ಎಲ್ಲಾ ರೀತಿಯ ದಿನಸಿ, ತರಕಾರಿ, ಎಲೆಕ್ಟ್ರಾನಿಕ್ಸ್ ಸಾಮಗ್ರಿ, ಕೃಷಿ ಉತ್ಪನ್ನಗಳು, ಪೂಜಾ ಸಾಮಗ್ರಿಗಳು, ಬಟ್ಟೆಬರೆಗಳು ಹಾಗೂ ಮತ್ತಿತರ ಸಾಮಗ್ರಿಗಳನ್ನು ನಾಡಿನ ಗ್ರಾಮ ಗ್ರಾಮಕ್ಕೆ, ಮನೆ ಮನೆಗೆ,ಹಳ್ಳಿ ಹಳ್ಳಿಗೂ ನೀಡಲಿದೆ.
ಆತ್ಮ ನಿರ್ಭರತೆಯ ಕಡೆಗೆ ; ತುಳುನಾಡಿನ ನಡಿಗೆ (ಮೊಬೈಲ್ ಆಪ್ ಒತ್ತುಂಡ ; ಪೂರಾ ‘ಈರೆನ ಇಲ್ಲಗೆ’)
ಮೊಬೈಲ್ ಆಪ್ ಹಾಗೂ ವೆಬ್ಸೈಟ್ ತುಳುನಾಡಿನ ಎಲ್ಲ ಜನ ಸಮುದಾಯಕ್ಕೆ ಹಾಗೂ ಹಲವಾರು ವ್ಯಾಪಾರಿಗಳಿಗೆ ಬೆಂಬಲವಾಗಿ ನಿಲ್ಲಲಿದೆ. ದಿನಸಿ, ತರಕಾರಿ ಹಾಗೂ ಮತ್ತಿತರ ಎಲ್ಲಾ ರೀತಿಯ ವಸ್ತುಗಳನ್ನು ಮನೆ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ವಹಿಸಲಿದೆ.