ಬೆಳ್ತಂಗಡಿ: ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಮತ್ತು ನಗದನ್ನು ಸಂಬಂಧಿಕ ಯುವಕನೋರ್ವ ಕದ್ದೋಯ್ಯಿದ್ದಾನೆ ಎಂದು ಆರೋಪಿಸಿ ಮಹಿಳೆಯೋರ್ವರು ಠಾಣೆಗೆ ದೂರು ನೀಡಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕು ನೆರಿಯಾ ಗ್ರಾಮದ ಕುಲೆನಾಡಿ ನಿವಾಸಿ ಚಂದ್ರಾವತಿ ಎಂಬವರು ಸಚಿನ್ ಎಂಬಾತನ ವಿರುದ್ಧ ದೂರು ನೀಡಿದ್ದಾರೆ.
ಚಂದ್ರಾವತಿ ಎಂಬವರು ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಗುಂಪಿನಿಂದ 2,47,000 ರೂ. ಸಾಲವನ್ನು ಪಡೆದಿದ್ದು, ಆ ಪೈಕಿ 65,000 ರೂ. ಅನ್ನು ತಮ್ಮ ಮನೆಯ ಮಲಗುವ ಕೊಠಡಿಯಲ್ಲಿರುವ ಬೀರುವಿನಲ್ಲಿಟ್ಟಿದ್ದು, ಹಣವನ್ನು ತೆಗೆಯಲು ಹೋದಾಗ ಹಣವು ಕಾಣದೇ ಇದ್ದು, ಹಣವನ್ನು ತೆಗೆಯಲು ಹೋದಾಗ ಹಣವು ಕಂಡುಬಾರದೇ ಇದ್ದು ಸಂಶಯಗೊಂಡು ಆಭರಣ ಇಟ್ಟಿದ್ದ ಡಬ್ಬಯನ್ನು ನೋಡಿದಾಗ, ಡಬ್ಬಿಯಲ್ಲಿಟ್ಟಿದ್ದ ಚಿನ್ನದ ನೆಕ್ಲೆಸ್ ಹಾಗೂ ಚಿನ್ನದ ಸರ ಕೂಡಾ ಕಾಣದೆ ಇದ್ದು ಸಂಬಂಧಿಯಾದ ಸಚಿನ್ ಎಂಬಾತ ಮನೆಗೆ ಆಗಾಗ ಬರುತ್ತಿದ್ದು ಆತನ ಮೇಲೆ ಸಂಶಯವಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಳುವಾದ ಚಿನ್ನದ ಅಂದಾಜು ಮೌಲ್ಯ 17,5000 ರೂ., ಕಳುವಾದ ಹಣ ಹಾಗೂ ಆಭರಣದ ಒಟ್ಟು ಅಂದಾಜು ಮೊತ್ತ 2,40,00 ರೂ. ಅಂದಾಜು ಮೊತ್ತವಾಗಿದ್ದು, ಈ ಬಗ್ಗೆ ಠಾಣೆಯಲ್ಲಿ ಅ.ಕ್ರ 19/2022 ಕಲಂ:454,457,380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.