ಮಂಗಳೂರು: ನಗರದ ಪ್ರಸಿದ್ಧ ಜವುಳಿ ಉದ್ಯಮಿ ಪಿ.ಕೆ. ದೂಜ ಪೂಜಾರಿ ಅವರ ಸೊಸೆ ಉದ್ಯಮಿ ಸುಮಾ ಸತೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಮಾ ರವರಿಗೆ ಕ್ಯಾನ್ಸರ್ ಪತ್ತೆಯಾಗಿದ್ದು, ಇದರಿಂದ ಮನನೊಂದು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇವರು ಭೂಮಿಕ ಟೆಕ್ಸ್ ಟೈಲ್ಸ್ನ ಮಾಲಕಿಯಾಗಿದ್ದು, ನಗರದ ಖ್ಯಾತ ಬಟ್ಟೆ ಉದ್ಯಮಿ ಪಿ.ಕೆ. ದೂಜ ಪೂಜಾರಿ ಅವರ ಸೊಸೆಯಾಗಿದ್ದಾರೆ.
ಕ್ಯಾನ್ಸರ್ ಇದೆ ಎಂದು ತಿಳಿದು ಬಂದ ಬೆನ್ನಲ್ಲೇ ದುಡುಕಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ನಗರದ ಮಣ್ಣಗುಡ್ಡೆಯ ಅಭಿಮಾನ್ ಪ್ಯಾಲೇಸ್ನ ಫ್ಲ್ಯಾಟ್ನಲ್ಲಿ ವಾಸವಿದ್ದ ಅವರು, ಫ್ಲ್ಯಾಟ್ನೊಳಗೆ ನೇಣು ಬಿಗಿದುಕೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.