ಪುತ್ತೂರು: ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲ ಘಟಕ ಹಾಗೂ ಹಿಂದೂ ಐಕ್ಯ ವೇದಿಕೆ ದೇಲಂಪಾಡಿ ಘಟಕದ ವತಿಯಿಂದ ಇತ್ತೀಚಿಗೆ ನಿಧನರಾದ ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತ ಜೀವನ್ ಮಯ್ಯಾಳ ರವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಚಿನ್ಮಯ್ ಈಶ್ವರಮಂಗಲ, ರಾಜೇಶ್ ಪಂಚೋಡಿ, ಚಂದ್ರಹಾಸ್ ಈಶ್ವರಮಂಗಲ, ಗಣೇಶ್ ಮಯ್ಯಲ ನುಡಿನಮನ ಸಲ್ಲಿಸಿದರು. ಸಂಪನ್ಮೂಲ ವ್ಯಕ್ತಿ ಪೂರ್ಣ ಆತ್ಮರಾಮ್ ಈಶ್ವರಮಂಗಲ ಆತ್ಮಹತ್ಯೆ ಒಂದು ಮಹಾ ಪಾಪ ಎನ್ನುವ ವಿಷಯದ ಬಗ್ಗೆ ಉಪನ್ಯಾಸವನ್ನು ನೀಡಿದರು.