ಬಂಟ್ವಾಳ: ಅನಾರೋಗ್ಯದಿಂದಿದ್ದ ಬಾಲಕನೋರ್ವ ಮೃತಪಟ್ಟ ಘಟನೆ ಮೂಡಪಡುಕೋಡಿ ಗ್ರಾಮದ ಪಂಜೋಡಿಯಲ್ಲಿ ನಡೆದಿದೆ.
ಪಂಜೋಡಿ ನಿವಾಸಿ ನಳಿನಾಕ್ಷಿ ಶೆಟ್ಟಿ ಅವರ ಪುತ್ರ ಧ್ವನಿತ್(6) ಮೃತಪಟ್ಟ ಬಾಲಕ.
ಧ್ವನಿತ್ ಕಳೆದ ಮೂರು ವರ್ಷಗಳಿಂದ ಖಾಯಿಲೆಯಿಂದ ಬಳಲುತ್ತಿದ್ದು, ಮಾ. 20ರಂದು ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ವೈದ್ಯರೊಬ್ಬರ ಬಳಿ ಕರೆದುಕೊಂಡು ಹೋದಾಗ ಖಾಯಿಲೆ ಉಲ್ಬಣಿಸಿದೆ. ಬಳಿಕ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.