ಪುತ್ತೂರು: ಮಿತ್ರವೃಂದ ವಾಲಿಬಾಲ್ ಅಕಾಡೆಮಿ ವತಿಯಿಂದ ಪುತ್ತೂರು ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಬಾಲಚಂದ್ರ ರವರಿಗೆ ಅಭಿನಂದನಾ ಸಮಾರಂಭವು ದರ್ಬೆ ಡಾ.ಪ್ರದೀಪ್ ಕುಮಾರ್ ಅವರ ಹಾಸ್ಪಿಟಲ್ ಆವರಣದಲ್ಲಿ ನಡೆಯಿತು.
ಮಿತ್ರವೃಂದ ವಾಲಿಬಾಲ್ ಅಕಾಡೆಮಿ ಅಧ್ಯಕ್ಷರಾದ ಪಿ ವಿ ಕೃಷ್ಣನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಕಾರ್ಯದರ್ಶಿ ಪ್ರಸನ್ನ ಕುಮಾರ್, ಬಾಲಚಂದ್ರ ಅವರ ಮಾತನಾಡಿದರು.
ಅಕಾಡೆಮಿ ಅಧ್ಯಕ್ಷರಾದ ಪಿ ವಿ ಕೃಷ್ಣನ್ ರವರು ಶಾಲುಹೊದಿಸಿ ಗೌರವಿಸಿದರು. ಡಾ. ಪ್ರದೀಪ್ ಕುಮಾರ್ ರವರು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಬಾಲಚಂದ್ರ ಅವರ ಸ್ಪಂದನಾ ಮನೋಭಾವದ ಬಗ್ಗೆ ವಿವರಿಸಿದರು.ಪಿ ವಿ ನಾರಾಯಣ ರವರು ಹೂ ಗುಚ್ಚ ನೀಡಿ ಅಭಿನಂದಿಸಿದರು. ಸಭೆಯಲ್ಲಿ ಅಕಾಡೆಮಿ ಸದಸ್ಯರಾದ ರಾಮಚಂದ್ರ, ಪಿ ವಿ ರಾಘವನ್, ಸಿರಾಜುದ್ದೀನ್ ಕೆ ಪಿ, ವಿಖ್ಯಾತ್, ನಾರಾಯಣ, ಹಮೀದ್ ಸಾಜ, ಶಿವರಂಜನ್ ದೇರ್ಲ, ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಲಚಂದ್ರ ರವರು ಮಾತನಾಡಿ ಹೇಳಿ ಕೃತಜ್ಞತೆ ಸಲ್ಲಿಸಿದರು. ಶಿವಶ್ರೀರಾಜನ್ ಸ್ವಾಗತಿಸಿ, ವಂದಿಸಿದರು.