ಪುತ್ತೂರು: ಕರ್ಕೇರ ತರವಾಡು ಏಕತಾ ಮನೆ ಬಟ್ರುಪ್ಪಾಡಿ, ಕೊಡಿಪ್ಪಾಡಿಯಲ್ಲಿ ಧರ್ಮದೈವ ಹಾಗೂ ಪರಿವಾರ ದೈವಗಳ ದೊಂದಿ ಬೆಳಕಿನ ನೇಮೋತ್ಸವವು ಮಾ.22 ರಂದು ನಡೆಯಲಿದೆ.
ಮಾ.22 ರಂದು ಬೆಳಿಗ್ಗೆ ಗಣಪತಿ ಹವನ, ಹರಿಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ, ಧರ್ಮದೈವ ಹಾಗೂ ಪರಿವಾರ ದೈವಗಳಿಗೆ ವಾರ್ಷಿಕ ತಂಬಿಲ ಸೇವೆ, ಸಂಜೆ ಭಜನೆ ಮತ್ತು ಗಣ್ಯರಿಗೆ ಸನ್ಮಾನ ಹಾಗೂ ರಾತ್ರಿ ದೈವಗಳ ಭಂಡಾರ ತೆಗೆಯುವುದು, ಅನ್ನಸಂತರ್ಪಣೆ ನಂತರ ಧರ್ಮದೈವ ಪಂಜುರ್ಲಿ, ಕಲ್ಲುರ್ಟಿ, ಕನಡ ರಾಹುಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.