ಪುತ್ತೂರು: ‘ಶ್ರೀ ಮಾತ’ ಎಂಟರ್ಪ್ರೈಸಸ್ ನೂತನವಾಗಿ ನರಿಮೊಗರು ಗ್ರಾಮದ ಮೊಗೇರಡ್ಕದಲ್ಲಿ ಮಾ.23 ರಂದು ಶುಭಾರಂಭಗೊಂಡಿತು.
ನೂತನ ಮಳಿಗೆಯನ್ನು ದೀಪ ಪ್ರಜ್ವಲಿಸುವ ಮೂಲಕ ಸುಂದರ ಪುರುಷ ರವರು ಉದ್ಘಾಟನೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ದಯಾನಂದ ಎಂ., ಜಯರಾಮ ಕೆ.ಎಸ್.ಆರ್.ಟಿ.ಸಿ., ಭಾಗ್ಯೋದಯ ಇಂಡಸ್ಟ್ರೀಸ್ ನ ರವಿ ಎಂ, ವಿನೋದ್, ನಾರಾಯಣ ಪುರುಷ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸುಂದರಿ, ಲೀಲಾವತಿ, ಸಾವಿತ್ರಿ,ನವೀನ ಉಡುಪಿ, ಶುಭಾವತಿ, ಶಿವಕುಮಾರ್ ದಂಪತಿಗಳು ಮತ್ತು ಮಾಲಕರಾದಂತಹ ರವಿ ಎಂ, ಮಾಲಕರ ತಂದೆ ವಿಶ್ವನಾಥ್ ಜೋಗಿ, ತಾಯಿ ವಾರಿಜ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಶುಭ ಸಮಾರಂಭಗಳಿಗೆ ಉತ್ತಮ ಗುಣಮಟ್ಟದ ಹಾಳೆ, ತಟ್ಟೆಗಳನ್ನು ಗ್ರಾಹಕರಿಗೆ ರಖಂ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಮಾಲಕರು ಪ್ರಕಟಣೆ ತಿಳಿಸಿದ್ದಾರೆ.