ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಪುತ್ತೂರು, ಗ್ರಾಮ ಪಂಚಾಯತ್ ನರಿಮೊಗ್ರು ಇದರ ವತಿಯಿಂದ ನರಿಮೊಗ್ರು ಗ್ರಾಮ ಪಂಚಾಯತ್ ಡಿಜಿಟಲ್ ಗ್ರಂಥಾಲಯದ ಉದ್ಘಾಟನೆ ಹಾಗೂ ಸ್ವಚ್ಛವಾಹಿನಿ ಘನತ್ಯಾಜ್ಯ ವಾಹನದ ಲೋಕಾರ್ಪಣಾ ಕಾರ್ಯಕ್ರಮ ಎ.8 ರಂದು ನಡೆಯಿತು.
ಡಿಜಿಟಲ್ ಗ್ರಂಥಾಲಯ ಉದ್ಘಾಟನೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು ರವರು ಉದ್ಘಾಟಿಸಿದರು. ಬಳಿಕ ಸ್ವಚ್ಛ ವಾಹಿನಿ ಘನತ್ಯಾಜ್ಯ ಸಾಗಾಟ ವಾಹನವನ್ನು ಶಾಸಕರು ಚಲಾಯಿಸುವ ಮೂಲಕ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭ ಮಹಾತ್ಮ ಗಾಂಧಿ ನರೇಗಾ ಯೋಜನೆಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಒಂಬಡ್ಸ್ಮನ್ ಹಾಗೂ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ರಾಮದಾಸ್ ಗೌಡ ಜೊತೆಗಿದ್ದರು. ನರಿಮೊಗ್ರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿದ್ಯಾ, ಉಪಾಧ್ಯಕ್ಷರಾದ ಸುಧಾಕರ ಕುಲಾಲ್, ಸದಸ್ಯರು, ಪಂಚಾಯತಿ ಅಧಿಕಾರಿಯಾದ ರವಿಚಂದ್ರ ಯು, ಕಾರ್ಯದರ್ಶಿಯಾದ ಶೇಖ್ ಕಲಂದರ್ ಅಲಿ, ಬಿಂದು ಫ್ಯಾಕ್ಟರಿಯ ಅಧಿಕಾರಿಯಾದ ನಾಗರಾಜ್, ಗ್ರಂಥಪಾಲಕ ವರುಣ್ ಕುಮಾರ್ ಉಪಸ್ಥಿತರಿದ್ದರು. ಗ್ರಾ. ಪಂ. ಸದಸ್ಯ ನವೀನ್ ಕಾರ್ಯಕ್ರಮ ನಿರ್ವಹಿಸಿದರು.