ವಿಟ್ಲ: ಅಪ್ರಾಪ್ತ ಬಾಲಕನಿಗೆ ಪೋಷಕರು ಕ್ರಿಕೆಟ್ ನೋಡಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪುಚ್ಚೆಗುತ್ತು ಎಂಬಲ್ಲಿ ನಡೆದಿದೆ.
ಪುಚ್ಚೆಗುತ್ತು ಜೋಗಿಬೆಟ್ಟು ವಾಮನ ಪೂಜಾರಿ ರವರ ಪುತ್ರ ಉಜ್ವಲ್ (14) ಮೃತಪಟ್ಟ ಬಾಲಕ.

ಉಜ್ವಲ್ ವಿಟ್ಲ ಮಾದರಿ ಶಾಲೆಯ ವಿದ್ಯಾರ್ಥಿ ಎನ್ನಲಾಗಿದೆ. ಪೋಷಕರು ಕ್ರಿಕೆಟ್ ನೋಡಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ಮನನೊಂದ ಬಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.