ಮಾಣಿ: ಗ್ರಾಮದ ಶಂಭುಗ ಬಾಲಮಂಟಮೆ ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಸ್ಥಾನದಲ್ಲಿ ಇತ್ತೀಚಿಗೆ ನಡೆದ ತಾಂಬೂಲ ಪ್ರಶ್ನಾ ಚಿಂತನೆಯ ಪ್ರಕಾರ ಕ್ಷೇತ್ರದಲ್ಲಿ ಚೈತನ್ಯ ವೃದ್ಧಿಗಾಗಿ ಏ.30 ರಿಂದ ಮೇ. 5 ರ ತನಕ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳವರ ಮಾರ್ಗದರ್ಶನದಲ್ಲಿ, ವೇದಮೂರ್ತಿ ವಿದ್ವಾನ್ ಬೋಳಂತಕೋಡಿ ರಾಮ ಭಟ್ ರವರ ಉಪಸ್ಥಿತಿಯಲ್ಲಿ, ಪಳನೀರು ಅನಂತ ಭಟ್ ರವರ ನೇತೃತ್ವದಲ್ಲಿ ಗಣಹೋಮ, ಮಹಾ ಮೃತ್ಯುಂಜಯ ಹೋಮ, ನಿಧಿಕುಂಭ ಸಮರ್ಪಣೆ , ದೈವಗಳಿಗೆ ಕಲಶ ಮತ್ತು ತಂಬಿಲ ಸೇವೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಕಾರ್ಯಕ್ರಮದಲ್ಲಿ ಮಾಣಿಗುತ್ತು ಸಚಿನ್ ರೈ, ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ ಅರೆಬೆಟ್ಟುಗುತ್ತು , ತಿರುಮಲಕುಮಾರ್ ಮಜಿ, ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು, ಬಾಲಕೃಷ್ಣ ಆಳ್ವ ಕೊಡಾಜೆ, ವೆಂಕಪ್ಪ ಪೂಜಾರಿ ಪಲ್ಲತ್ತಿಲ, ಸೀತಾರಾಮ ಶೆಟ್ಟಿ ಶಂಭುಗ, ಗೋಪಾಲ ಮೂಲ್ಯ ನೆಲ್ಲಿ, ಲೋಕೇಶ್ ಪೂಜಾರಿ ಪಲ್ಲತ್ತಿಲ,ವಾಸಪ್ಪ ಗೌಡ ಮಂಟಮೆ ಚಾವಡಿ ಸೇರಿದಂತೆ ಗುಡ್ಡೆಚಾಮುಂಡಿ ಸೇವಾಸಮಿತಿ ಪದಾಧಿಕಾರಿಗಳು, ಶಂಭುಗ ಫ್ರೆಂಡ್ಸ್ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಮತ್ತು ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.



