ಬಂಟ್ವಾಳ: ತಾಲೂಕಿನ ದೇವಸ್ಯ ಪಡೂರ್ ಗ್ರಾಮದಲ್ಲಿ ‘ಸತ್ಯದ ತುಳುವೆರ್’ (ರಿ.) ಸಂಸ್ಥೆಯ 28ನೇ ಸೇವಾ ಯೋಜನೆಯಡಿಯಲ್ಲಿ ನೂತನವಾಗಿ ನಿರ್ಮಿಸಿರುವ 3ನೇ ಗೃಹ ‘ಸತ್ಯದ ತುಳುವೆರ್’ ಇದರ ಗಣಹೋಮ ಹಾಗೂ ಗೃಹ ಹಸ್ತಾಂತರ ಕಾರ್ಯಕ್ರಮವೂ ಮೇ.13 ರಂದು ನಡೆಯಲಿದೆ.

‘ಸತ್ಯದ ತುಳುವೆರ್’ ಸಂಸ್ಥೆಯು ಕಳೆದ ಸುಮಾರು ವರ್ಷಗಳಿಂದ ಸಾಮಾಜಿಕ ಕಾರ್ಯಗಳನ್ನು ನೆರವೇರಿಸುವ ಮೂಲಕ ಜನ ಮನ್ನಣೆಗೆ ಪಾತ್ರವಾಗಿದೆ.
ಈ ಸಂಸ್ಥೆಯ ಸೇವಾ ಯೋಜನೆಯಡಿಯಲ್ಲಿ ನಿರ್ಮಾಣವಾಗಿರುವ ಮೂರನೇ ಗೃಹ ‘ಸತ್ಯದ ತುಳುವೆರ್’ ಇದರ ಹಸ್ತಾಂತರ ಕಾರ್ಯಕ್ರಮವೂ ಅದ್ದೂರಿಯಾಗಿ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ.
