ಬಂಟ್ವಾಳ: ತಾಲೂಕಿನ ತಹಶೀಲ್ದಾರ್ ಆಗಿ ಡಾ.ಸ್ಮಿತಾ ರಾಮು ನೇಮಕವಾಗಿದ್ದಾರೆ.
ಇವರು ಮಂಡ್ಯ ಜಿಲ್ಲೆಯ ಚುನಾವಣಾ ಶಾಖೆಯ ತಹಶೀಲ್ದಾರ್, 2015ನೇ ಬ್ಯಾಚ್‌ನ ಕೆಎಎಸ್ ಅಧಿಕಾರಿಯಾಗಿದ್ದಾರೆ.ಈ ಹಿಂದೆ ರಶ್ಮಿ ಎಸ್.ಆರ್.ಅವರು ಬಂಟ್ವಾಳ ತಹಶೀಲ್ದಾರ್ ಆಗಿದ್ದು, ಅವರನ್ನು ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ವರ್ಗಾವಣೆ ಮಾಡಿದ ಬಳಿಕ ಬಂಟ್ವಾಳ ತಹಶೀಲ್ದಾರ್ ಹುದ್ದೆ ಖಾಲಿಯಾಗಿತ್ತು.
ಡಾ| ಸ್ಮಿತಾ ಅವರು ಮೂಲತಃ ದಂತ ವೈದ್ಯೆಯಾಗಿದ್ದಾರೆ.ಮಂಗಳೂರಿನ ಏನಪೋಯ ದಂತ ವೈದ್ಯಕೀಯ ಕಾಲೇಜಿನಲ್ಲಿ ಬಿಡಿಎಸ್ ಪದವಿ ಪಡೆದಿರುವ ಅವರು ಬಳಿಕ ಸುಮಾರು 14 ವರ್ಷಗಳ ಕಾಲ ಮಂಡ್ಯ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸಿದ್ದರು