ಪುತ್ತೂರು: ಎಪಿಎಂಸಿ ರಸ್ತೆ ಅಗಲೀಕರಣ ಮಾಡುವ ಬಗ್ಗೆ ಮಾಹಿತಿ ನೀಡುವಂತಹ ಕಾರ್ಯಕ್ರಮ ಎಪಿಎಂಸಿ ವತಿಯಿಂದ ಮೇ.21 ರಂದು ನಡೆಯಲಿದೆ ಎಂದು ಶಾಸಕರಾದಂತಹ ಸಂಜೀವ ಮಠಂದೂರು ರವರು ತಿಳಿಸಿದ್ದಾರೆ.
ನಗರ ಸಭೆ, ಕಂದಾಯ ಇಲಾಖೆ, ಸಹಾಯಕ ಆಯುಕ್ತರು, ಪೌರಾಯುಕ್ತರು ಈ ಬಗ್ಗೆ ಅನುಮತಿಯನ್ನು ನೀಡಿದ್ದು, ಈ ಕಾಮಗಾರಿ ನಡೆಯಬೇಕಿದ್ದರೆ ಅದಕ್ಕಿಂತ ಮೊದಲು ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿಯನ್ನು ನೀಡುವಂತಹ ಕಾರ್ಯಕ್ರಮ ನಡೆಯಲಿದೆ.

ಇದರ ಹಿನ್ನೆಲೆ ಏನು..??, ಅವಶ್ಯಕತೆಗಳೇನು..??, ಇದರ ಹಿಂದೆ ಯಾರೆಲ್ಲಾ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಎಂದೆಲ್ಲಾ ಸಾರ್ವಜನಿಕ ತಿಳಿಯ ಪಡಿಸುವ ದೃಷ್ಟಿಯಿಂದ ಒಳ್ಳೆಯ ಒಂದು ಕಾರ್ಯಕ್ರಮ ಮಾಡಬೇಕು ಎಂದು ಎಪಿಎಂಸಿ ಅಧ್ಯಕ್ಷರು, ಸದಸ್ಯರು, ವರ್ತಕ ಸಮುದಾಯದವರು ನಿರ್ಧರಿಸಿದ್ದಾರೆ.
ಕಾರಣಕರ್ತರಾದ ಸಂಸದ ನಳಿನ್ ಕುಮಾರ್ ಕಟೀಲ್, ಡಿ. ವಿ. ಸದಾನಂದ ಗೌಡರು, ಉಸ್ತುವಾರಿ ಸಚಿವರಾದ ಸುನೀಲ್ ಕುಮಾರ್ ರವರು, ಸುಳ್ಯದ ಶಾಸಕರಾದ ಎಸ್. ಅಂಗಾರ ರವರು, ಅದೇ ರೀತಿ ಎಪಿಎಂಸಿ ಮತ್ತು ಸಹಕಾರಿ ಸಚಿವರಾದ ಎಸ್. ಟಿ. ಸೋಮಶೇಖರ್ ರವರು, ಕೋಟ ಶ್ರೀನಿವಾಸ ಪೂಜಾರಿ ರವರ ನೇತೃತ್ವದಲ್ಲಿ ಎಪಿಎಂಸಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಈ ಕಾರ್ಯಕ್ರಮ ನಡೆಯುತ್ತಿದೆ.
ಎಪಿಎಂಸಿಗೆ ಬರುವ ರೈತಾಪಿ ವರ್ಗ, ವರ್ತಕ ಸಮುದಾಯ, ಅದೇ ರೀತಿ ಆಸ್ಪತ್ರೆಗೆ ತೆರಳುವ ಇಲ್ಲಿನ ರೋಗಿಗಳು ಸರಾಗವಾಗಿ ತೆರಳಬೇಕು ಎನ್ನುವಂತಹ ಉದ್ದೇಶದಿಂದ, ಇಷ್ಟು ಜನರನ್ನು ಕರೆದು ಪುತ್ತೂರಿನ ಜನತೆಗೆ ಸಂದೇಶವನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಎಪಿಎಂಸಿ ಕಾರ್ಯಕ್ರಮಕ್ಕೆ ಮಾಹಿತಿ ಪ್ರಕಾರ, ಸಂಸದರಾದ ಪ್ರತಾಪ್ ಸಿಂಹ ನಾಯಕ್, ಶಾಸಕರಾದ ಹರೀಶ್ ಕುಮಾರ್, ಭೋಜೆ ಗೌಡ, ಮಂಜುನಾಥ್ ಭಂಡಾರಿ, ನಗರ ಸಭೆಯ ಪ್ರಥಮ ಪ್ರಜೆ ಜೀವಂಧರ್ ಜೈನ್, ರೈಲ್ವೆಯ ಡಿ. ಆರ್. ರಾಹುಲ್, ಕೃಷಿ ಮಾರುಕಟ್ಟೆ ನಿರ್ದೇಶಕರಾದ ಯೋಗೀಶ್, ಜಿಲ್ಲಾಧಿಕಾರಿ ರಾಜೇಂದ್ರ ಕೆ. ವಿ. ಮತ್ತು ಅನೇಕ ನಾಯಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ನೌಕರರ, ಅಧಿಕಾರಿಗಳ ವಸತಿಗೃಹ ಉದ್ಘಾಟನೆ, ರೈಲ್ವೆ ಅಂಡರ್ ಬ್ರಿಡ್ಜ್ ಶಿಲಾನ್ಯಾಸ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು. ಈ ಕಾರ್ಯಕ್ರಮ ಇಡೀ ಜಿಲ್ಲೆ, ರಾಜ್ಯಕ್ಕೆ ಉತ್ತಮ ಸಂದೇಶ ನೀಡುವಂತಹ ಕಾರ್ಯಕ್ರಮವಾಗಬೇಕು ಎಂದರು.