ಪುತ್ತೂರು: ಸುದಾನ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಕುಮಾರಿ ಮೋನಿಕಾ ಬಿವಿ ರವರ ಹುಟ್ಟುಹಬ್ಬ ಆಚರಣೆಯು ಅವರ ನಿವಾಸ ಕಲ್ಲಿಮಾರಿನ ಕೀರ್ತನ ಪ್ಯಾರಡೈಸ್ ಕಟ್ಟಡದದಲ್ಲಿ ಗಣ್ಯ ಅತಿಥಿಗಳು ಹಾಗೂ ಸ್ಥಳೀಯರ ಸಮ್ಮುಖದಲ್ಲಿ ನಡೆಯಿತು.

ಈ ವೇಳೆ ವಾಯ್ಸ್ ಆಫ್ ಆರಾಧನ ಮೂಡಬಿದ್ರೆ ಹಾಗೂ ಶ್ರೀ ಕೃಷ್ಣ ಯುವಕ ಮಂಡಲ (ರಿ.) ಸಿಟಿಗುಡ್ಡೆ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿನಿಯ ಬಹುಮುಖ ಪ್ರತಿಭೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.

ಪುತ್ತೂರಿನಲ್ಲಿ ಹಲವರಿಗೆ 17 ಬಾರಿ ರಕ್ತದಾನ ಮಾಡಿದ, ವಾಯ್ಸ್ ಆಫ್ ಆರಾಧನಾ ಮೂಡಬಿದ್ರೆ ಇದರ ಸದಸ್ಯರಾದ ನವೀನ್ ಪುತ್ತೂರು ಹಾಗೂ ಸ್ನೇಹ ಟೆಕ್ ಟೆಲ್ಸ್ ನ ಉದ್ಯೋಗಿಯಾಗಿ, ಶ್ರೀಕೃಷ್ಣ ಯುವಕ ಮಂಡಲ ಸಿಟಿ ಗುಡ್ಡೆ ಇದರ ಅಧ್ಯಕ್ಷರಾಗಿರುವ ರಾಜುಗೌಡ ಇವರ ನೇತೃತ್ವದಲ್ಲಿ, ಮುಖ್ಯ ಅತಿಥಿಯಾದ ಚಿತ್ರನಟ ಹಾಗೂ ರಂಗಭೂಮಿ ಕಲಾವಿದ, ವಿಟ್ಲ ಗೃಹರಕ್ಷಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜೆಪಿ ಸಂತೋಷ ರವರು ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಚಲನಚಿತ್ರ ನಟ ಹಾಗೂ ರಂಗಭೂಮಿ ಕಲಾವಿದ ಕೃಷ್ಣಪ್ಪ ಶಿವನಗರ ನೆರವೇರಿಸಿದರು. ಈ ಸಂದರ್ಭದಲ್ಲಿ ಮೋನಿಕಾ ರವರ ತಾಯಿ ಶೋಭಾರಾಣಿ, ಅಜ್ಜಿ ನಾಗಮಣಿ, ಸರಕಾರಿ ಪ್ರೌಢಶಾಲೆ ಸೂರ್ಯ ಇಡ್ಕಿದು ಬಂಟ್ವಾಳ ತಾಲೂಕು ಇಲ್ಲಿನ ಮುಖ್ಯ ಶಿಕ್ಷಕರಾದ ರಾಧಾಕೃಷ್ಣ, ಸೌಮ್ಯ, ಸುಚಿತ ಹಾಗೂ ಎಸ್ಡಿಎಂಸಿ ಸದಸ್ಯರಾದ ಲಿಂಗಪ್ಪ ಗೌಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
