ನವರಸ ನಾಟ್ಯಗಳ ಮೂಲಕ ಪ್ರೇಕ್ಷಕರ ಮನ ಗೆದ್ದ ನೆಲ್ಯಾಡಿ ಮೂಲದ ಪ್ರತಿಭೆ ಅರ್ಚನಾ ಸಂಪ್ಯಾಡಿ ರವರಿಗೆ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ ಪುರಸ್ಕಾರ ಲಭಿಸಿದೆ.

ಹೆತ್ತವರ ಪ್ರೋತ್ಸಾಹದೊಂದಿಗೆ ಹೆಜ್ಜೆ ಗೆಜ್ಜೆಯಾ ನಾದವನ್ನು ಕಲಾ ಪ್ರೇಕ್ಷಕರಿಗೆ ಉಣ ಬಡಿಸಿ, ಪ್ರೇಕ್ಷಕರ ಚಪ್ಪಾಳೆಗಳ ಮೂಲಕ ತನ್ನ ಅದ್ಬುತ ಪ್ರತಿಭೆಯನ್ನು ಎಲ್ಲೆಡೆ ಪಸರಿಸುವಂತೆ ಮಾಡಿದ ಬಾಲ ಪ್ರತಿಭೆಗೆ ಕರ್ನಾಟಕ ಮಹಿಳಾ ಪ್ರಶಸ್ತಿ ದೊರಕಿರುವುದು ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ಸಿಕ್ಕಿದಂತಾಗಿದೆ.

ಮುಂದಿನ ದಿನಗಳಲ್ಲಿಯೂ ಕಲಾ ಸೇವೆಯನ್ನು ಮಾಡುತ್ತಾ, ಇನ್ನಷ್ಟು ಪ್ರಶಸ್ತಿಗಳು ಹರಸಿ ಬರಲಿ ಎಂಬುದು ಎಲ್ಲರ ಆಶಯವಾಗಿದೆ..