Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪಂಚಮುಖಿ ಹವನಕ್ಕೆ ಪುತ್ತೂರು ಪೇಟೆಯಲ್ಲಿ ಆಮಂತ್ರಣ ಪತ್ರಿಕೆ ವಿತರಣೆ..!!

    ಪುತ್ತೂರು ದೀಪೋತ್ಸವಕ್ಕೆ ಸಿದ್ಧತೆ ಚುರುಕು; (ನ.25)ಕ್ಕೆ ಕಾರ್ಯಾಲಯ ಉದ್ಘಾಟನೆ..!!

    ಮುರುಳ್ಯ ರಕ್ತೇಶ್ವರಿ ಸಾನಿಧ್ಯವಿರುವ ಜಾಗ ಮುಸ್ಲಿಂ ದಫನ ಭೂಮಿಗೆ ಕಾದಿರಿಸಿದ ಆದೇಶಕ್ಕೆ ಹೈಕೋರ್ಟ್‌ ತಡೆ.!! ಖ್ಯಾತ ವಕೀಲ ಡಾ. ಅರುಣ್‌ಶ್ಯಾಮ್ ವಾದ ಮಂಡನೆ

    ಕಾಡಾನೆ ಕಾಟಕ್ಕೆ ಸಿಗದ ಪರಿಹಾರ: ಸ್ಟೀಕರ್ ಕಚೇರಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸಿದ ನಯನಾ ಮೋಟಮ್ಮ..!!

    ಪುತ್ತೂರು: ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ಅಭಿರಾಮ್ ಫ್ರೆಂಡ್ಸ್(ರಿ.) (AFC) ವತಿಯಿಂದ 4.520 ಗ್ರಾಂ ಚಿನ್ನದ ಗಟ್ಟಿ ಸಮರ್ಪಣೆ..!

    ಬಿಸ್ಲೆರಿ ನೀರು ಶುದ್ಧವಲ್ಲ, ಪರೀಕ್ಷೆಯಲ್ಲಿ ದೃಢ: ಬಿಸ್ಲೆರಿಇಂಟರ್‌ನ್ಯಾಷನಲ್ ಪ್ರಾಸಿಕ್ಯೂಷನ್‌ಗೆ ಅನುಮತಿ.!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಮಂಗಳೂರು

ಮುಸ್ಲಿಂ ನಾಮದಾರಿಗಳು ಅಥವಾ ಮುಸ್ಲಿಂ ಹೆಸರಿನ ಸಂಘಟನೆಗಳು ಮಾಡುವ ಅನಾಹುತಗಳಿಗೆ ಮುಸ್ಲಿಂ ಸಮುದಾಯ ಜವಾಬ್ದಾರರಲ್ಲ..!!- ಸೈಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್

May 27, 2022
in ಮಂಗಳೂರು
0
ಮುಸ್ಲಿಂ ನಾಮದಾರಿಗಳು ಅಥವಾ ಮುಸ್ಲಿಂ ಹೆಸರಿನ ಸಂಘಟನೆಗಳು ಮಾಡುವ ಅನಾಹುತಗಳಿಗೆ ಮುಸ್ಲಿಂ ಸಮುದಾಯ ಜವಾಬ್ದಾರರಲ್ಲ..!!- ಸೈಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಮಂಗಳೂರು: ಯುದ್ಧ ಮತ್ತು ಸಂಘರ್ಷವು ಇಸ್ಲಾಮಿನ ಸಿದ್ಧಾಂತವಲ್ಲ. ಧಾರ್ಮಿಕ ನಂಬಿಕೆಯೂ ಅಲ್ಲ. ಅದನ್ನು ಯಾವೊಬ್ಬ ಮುಸ್ಲಿಮನೂ ಅಂಗೀಕರಿಸುವುದಿಲ್ಲ ಎಂದು ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಅಧ್ಯಕ್ಷ ಸೈಯ್ಯದ್ ಮುಹ್ಮಮದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.

Advertisement
Advertisement

ದ.ಕ.ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಸಮಿತಿಯ ವತಿಯಿಂದ ‘ಸಹಬಾಳ್ವೆ ಮರಳಿ ಪಡೆಯಲು’ ಎಂಬ ಘೋಷವಾಕ್ಯ ದೊಂದಿಗೆ ನಗರದ ಪುರಭವನದಲ್ಲಿ ಗುರುವಾರ ನಡೆದ ಸೌಹಾರ್ದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುರ್‌ಆನಿನ ಅಧ್ಯಾಯಗಳನ್ನು ದುರ್ವ್ಯಾಖ್ಯಾನಗೊಳಿಸಿ ಇಸ್ಲಾಮನ್ನು ಕೋಮುವಾದಿಗಳ ಮತ್ತು ಭಯೋತ್ಪಾದಕರ ಧರ್ಮವನ್ನಾಗಿ ಬಿಂಬಿಸಲಾಗುತ್ತಿದೆ. ಧಾರ್ಮಿಕ ಅರಿವಿನ ಕೊರತೆಯೇ ಕೋಮುವಾದಕ್ಕೆ ಮೂಲ ಕಾರಣವಾಗಿದೆ. ದೇಶದ ಅಭಿವೃದ್ಧಿ ಹಾಗೂ ಏಕತೆಗೆ ಕೋಮುವಾದವು ಬಹಳ ಅಪಾಯಕಾರಿ ಎಂಬುದನ್ನು ಪ್ರತಿಯೊಬ್ಬ ಮುಸಲ್ಮಾನನೂ ತಿಳಿದುಕೊಂಡಿದ್ದಾನೆ. ಕೆಲವೊಂದು ನಾಮಧಾರಿಗಳು ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಕೋಮುವಾದವನ್ನು ಬಳಸಿದರೆ ಅದಕ್ಕೆ ಧರ್ಮದ ಸಿದ್ಧಾಂತ ಅಥವಾ ಧಾರ್ಮಿಕ ಗುರುಗಳು ಜವಾಬ್ದಾರರಲ್ಲ. ಆ ಸಂದೇಶವನ್ನು ಒಕ್ಕೊರಲಿನಿಂದ ಸಾರುವುದಕ್ಕಾಗಿ ಸರ್ವ ಧರ್ಮೀಯ ಗುರುಗಳು ಇಂದಿಲ್ಲಿ ಒಗ್ಗಟ್ಟಾಗಿ ಸೇರಿದ್ದೇವೆ ಎಂದು ಸೈಯ್ಯದ್ ಮುಹ್ಮಮದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.

Advertisement

ದೇವಾಲಯಗಳನ್ನು ಧ್ವಂಸಗೊಳಿಸಿ ಮಸೀದಿ ನಿರ್ಮಿಸಲಾಗಿದೆ ಎಂಬ ಆರೋಪಕ್ಕೆ ಆಧಾರವಿಲ್ಲ. ಭಾರತಕ್ಕೆ ಇಸ್ಲಾಮ್ ಧರ್ಮ ಆಗಮಿಸಿದ ಸಂದರ್ಭದಲೇ ಇಲ್ಲಿನ ಶಿಲ್ಪಿಗಳು ದೇವಾಲಯಗಳ ವಾಸ್ತುಶೈಲಿಯಲ್ಲೇ ಮಸೀದಿಯನ್ನು ನಿರ್ಮಿಸಿದ್ದಾರೆ. ಅದನ್ನೀಗ ಕೆಲವರು ದೇವಸ್ಥಾನವೆಂದು ವಾದಿಸುವುದು ಖಂಡನೀಯ. ವೈವಿದ್ಯತೆಯಲ್ಲಿ ಏಕತೆ ಮತ್ತು ಧಾರ್ಮಿಕ ಸಾಮರಸ್ಯದಿಂದಲೇ ಭಾರತದ ಅಸ್ತಿತ್ವ ಅಡಗಿದೆ. ಭಾರತ-ಪಾಕ್ ಯುದ್ಧ ನಡೆದಾಗ ಭಾರತೀಯ ಮುಸ್ಲಿಮರು ಭಾರತದ ಜೊತೆ ನಿಂತಿದ್ದಾರೆ. ಭವಿಷ್ಯದಲ್ಲೂ ಭಾರತದ ಜೊತೆ ನಿಲ್ಲಲಿದ್ದಾರೆ. ಅದರಲ್ಲಿ ಯಾವುದೇ ಸಂಶಯಬೇಡ. ವಾಸಿಸುವ ನೆಲದ ಸಂಸ್ಕೃತಿಯನ್ನು ಗೌರವಿಸುವುದು ಹಾಗೂ ಪ್ರಜಾಸತ್ತಾತ್ಮಕ ನಿಯಮಗಳನ್ನು ಪಾಲಿಸುವುದು ಧಾರ್ಮಿಕ ಕರ್ತವ್ಯವಾಗಿದೆ ಎಂದು ಸೈಯ್ಯದ್ ಮುಹ್ಮಮದ್ ಜಿಫ್ರಿ ಮುತ್ತುಕೋಯ ತಂಙಳ್ ತಿಳಿಸಿದರು.

ಸಮ್ಮೇಳನದ ಅಧ್ಯಕ್ಷತೆಯನ್ನು ಎಸ್ಕೆಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಫೈಝಿ ವೆಳ್ಳಾಯಿಕ್ಕೋಡು ವಹಿಸಿದ್ದರು. ಇಬ್ರಾಹೀಂ ಬಾಖವಿ ಕೆ.ಸಿ.ರೋಡ್ ದುಆಗೈದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ, ಮಾಜಿ ಸಚಿವ ರಮಾನಾಥ ರೈ ಶುಭ ಹಾರೈಸಿದರು. ಜಂಇಯ್ಯತುಲ್ ಖುತ್ಬಾದ ಜಿಲ್ಲಾಧ್ಯಕ್ಷ ದ.ಕ. ಎಸ್.ಬಿ.ದಾರಿಮಿ ದಿಕ್ಸೂಚಿ ಭಾಷಣ ಮಾಡಿದರು. ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಸ್ವಾಗತಿಸಿದರು.

ವೇದಿಕೆಯಲ್ಲಿ ಎಸ್ಕೆಎಸ್ಸೆಸ್ಸೆಫ್ ದ.ಕ.ಜಿಲ್ಲಾಧ್ಯಕ್ಷ ಸೈಯದ್ ಅಮೀರ್ ತಂಙಳ್ ಕಿನ್ಯ, ಫಕ್ರುದ್ದೀನ್ ತಂಙಳ್, ಹಾಶಿರಲಿ ತಂಙಳ್ ಪಾಣಕ್ಕಾಡ್, ಎಸ್‌ವೈಎಸ್ ಕೇರಳ ರಾಜ್ಯ ಕಾರ್ಯದರ್ಶಿ ಹಮೀದ್ ಫೈಝಿ ಅಂಬಲಕ್ಕಡವು, ಎಸ್ಕೆಎಸ್ಸೆಸ್ಸೆಫ್ ಕೇರಳ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ಪಂದಲ್ಲೂರು, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಝೈನುಲ್ ಆಬಿದೀನ್ ಜಿಫ್ರಿ ತಂಙಳ್, ಉಸ್ಮಾನುಲ್ ಫೈಝಿ ತೋಡಾರು, ತಾಜುದ್ದೀನ್ ದಾರಿಮಿ, ಸೈಯದ್ ಬಾಷಾ ತಂಙಳ್, ತಾಜುದ್ದೀನ್ ರಹ್ಮಾನಿ, ಹಾರಿಸ್ ಕೌಸರಿ, ಮುಸ್ತಫಾ ಹಾಜಿ ಕೆಂಪಿ, ಐ. ಮೊಯ್ದಿನಬ್ಬ ಹಾಜಿ ಎಂ. ಎಸ್.ಮುಹಮ್ಮದ್, ಕೆ. ಅಶ್ರಫ್, ಮುಹಮ್ಮದ್ ಮೋನು, ಕೆ.ಕೆ. ಶಾಹುಲ್ ಹಮೀದ್, ಅಬ್ಬಾಸ್ ಅಲಿ ಬೋಳಂತೂರು, ಮುಹಮ್ಮದ್ ಕುಂಜತ್ತಬೈಲ್, ಇಕ್ಬಾಲ್ ಮುಲ್ಕಿ, ಯು.ಪಿ. ಇಬ್ರಾಹೀಂ., ಸಿದ್ದೀಕ್ ಅಬ್ದುಲ್ ಖಾದರ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಶೀದ್ ರಹ್ಮಾನಿ ಕಾರ್ಯಕ್ರಮ ನಿರೂಪಿಸಿದರು. ಎಸ್ಕೆಎಸ್ಸೆಸ್ಸೆಫ್ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ ವಂದಿಸಿದರು.

Previous Post

ಪುತ್ತೂರು: ಹೆಡ್ಗೆವಾರ್ ಪಠ್ಯ ಸೇರ್ಪಡೆ ವಿರುದ್ಧ ಸಿ.ಎಫ್.ಐ. ಯಿಂದ ಪ್ರತಿಭಟನೆ

Next Post

ಮಂಗಳೂರು: ಸ್ಕೂಟರ್‌ನಲ್ಲಿ ಡ್ರಗ್ಸ್‌ ಪತ್ತೆ: ಆರೋಪಿಯ ಬಂಧನ

OtherNews

ಮಂಗಳೂರು: ಮೆಡಿಕಲ್ ವಿದ್ಯಾರ್ಥಿನಿ ಕಿಡ್ನಾಪ್‌ ಕೇಸ್‌ : ಕೇರಳದಲ್ಲಿ ಪತ್ತೆ; ಹೆತ್ತವರ ಜೊತೆ ಹೋಗಲು ನಿರಾಕರಿಸಿದ ಯುವತಿ..!
ಕ್ರೈಮ್

November 21, 2026
ಮಂಗಳೂರು: ಕೆಲಸದ ಹಣದ ವಿಚಾರಕ್ಕೆ ಮನೆಗೆ ನುಗ್ಗಿ ವ್ಯಕ್ತಿಯ ಕೊಲೆ – ಆರೋಪಿಗೆ ಜೀವಾವಧಿ ಶಿಕ್ಷೆ..!!
Featured

November 20, 2026
ಪಣಂಬೂರು ರೆಸ್ಟೋರೆಂಟ್‌ನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ..!!

November 14, 2026
ಬಡ ಕುಟುಂಬಗಳ ಮದುವೆಗೆ ₹25 ಲಕ್ಷ ನೆರವು: 100 ಕುಟುಂಬಗಳಿಗೆ ಇನಾಯತ್ ಅಲಿ ಅವರಿಂದ ಮಾನವೀಯ ಕೊಡುಗೆ..!!
ಮಂಗಳೂರು

November 8, 2026
ದೀಪಾವಳಿ ಸಂಭ್ರಮದಲ್ಲಿ ಪೌರಕಾರ್ಮಿಕರಿಗೆ ಆತಿಥ್ಯ – ನಂದನ್ ಮಲ್ಯ ಕುಟುಂಬದಿಂದ ಗೌರವ ಸಮರ್ಪಣೆ..!

ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಪಲ್ಟಿ; ಸಂಚಾರ ಅಸ್ತವ್ಯಸ್ತ..!!

November 7, 2026

Leave a Reply Cancel reply

Your email address will not be published. Required fields are marked *

Recent News

ಪಂಚಮುಖಿ ಹವನಕ್ಕೆ ಪುತ್ತೂರು ಪೇಟೆಯಲ್ಲಿ ಆಮಂತ್ರಣ ಪತ್ರಿಕೆ ವಿತರಣೆ..!!

ಪಂಚಮುಖಿ ಹವನಕ್ಕೆ ಪುತ್ತೂರು ಪೇಟೆಯಲ್ಲಿ ಆಮಂತ್ರಣ ಪತ್ರಿಕೆ ವಿತರಣೆ..!!

November 23, 2026
ಪುತ್ತೂರು ದೀಪೋತ್ಸವಕ್ಕೆ ಸಿದ್ಧತೆ ಚುರುಕು; (ನ.25)ಕ್ಕೆ ಕಾರ್ಯಾಲಯ ಉದ್ಘಾಟನೆ..!!

ಪುತ್ತೂರು ದೀಪೋತ್ಸವಕ್ಕೆ ಸಿದ್ಧತೆ ಚುರುಕು; (ನ.25)ಕ್ಕೆ ಕಾರ್ಯಾಲಯ ಉದ್ಘಾಟನೆ..!!

November 23, 2026
ಮುರುಳ್ಯ ರಕ್ತೇಶ್ವರಿ ಸಾನಿಧ್ಯವಿರುವ ಜಾಗ ಮುಸ್ಲಿಂ ದಫನ ಭೂಮಿಗೆ ಕಾದಿರಿಸಿದ ಆದೇಶಕ್ಕೆ ಹೈಕೋರ್ಟ್‌ ತಡೆ.!! ಖ್ಯಾತ ವಕೀಲ ಡಾ. ಅರುಣ್‌ಶ್ಯಾಮ್ ವಾದ ಮಂಡನೆ

ಮುರುಳ್ಯ ರಕ್ತೇಶ್ವರಿ ಸಾನಿಧ್ಯವಿರುವ ಜಾಗ ಮುಸ್ಲಿಂ ದಫನ ಭೂಮಿಗೆ ಕಾದಿರಿಸಿದ ಆದೇಶಕ್ಕೆ ಹೈಕೋರ್ಟ್‌ ತಡೆ.!! ಖ್ಯಾತ ವಕೀಲ ಡಾ. ಅರುಣ್‌ಶ್ಯಾಮ್ ವಾದ ಮಂಡನೆ

November 23, 2026
ಕಾಡಾನೆ ಕಾಟಕ್ಕೆ ಸಿಗದ ಪರಿಹಾರ: ಸ್ಟೀಕರ್ ಕಚೇರಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸಿದ ನಯನಾ ಮೋಟಮ್ಮ..!!

ಕಾಡಾನೆ ಕಾಟಕ್ಕೆ ಸಿಗದ ಪರಿಹಾರ: ಸ್ಟೀಕರ್ ಕಚೇರಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸಿದ ನಯನಾ ಮೋಟಮ್ಮ..!!

November 23, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page