ಪುತ್ತೂರು : ಮದುವೆ ಕಾರ್ಯಕ್ರಮಕ್ಕೆ ಬಂದ ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣವೊಂದು ಪುತ್ತೂರು ತಾಲೂಕಿನ ಕಬಕ ಎಂಬಲ್ಲಿ ಮಾ 28 ರಂದು ಭಾನುವಾರ ನಡೆದಿದೆ ಎನ್ನಲಾಗಿದೆ. ಕಬಕ ಮೂಲದ ಹಮೀದ್ ಯಾನೆ ಮೌಲ ಅಮ್ಮಿ ದೌರ್ಜನ್ಯ ಎಸಗಿದ ವ್ಯಕ್ತಿ ಎಂದು ದೂರಿನಲ್ಲಿ ತಿಳಿಸಲಾಗಿದ್ದೂ ಈತನ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ.
ವಿಟ್ಲ-ಪುತ್ತೂರು ರಸ್ತೆಯ ಕಬಕ ಸಮೀಪದ ಮನೆಯೊಂದರಲ್ಲಿ ಮದುವೆ ಕಾರ್ಯಕ್ರಮ ನಡೆದಿದ್ದೂ , ಇಲ್ಲಿಗೆ ಪುತ್ತೂರು ಮೂಲದ ಹನ್ನೊಂದು ವರ್ಷದ ಬಾಲಕ ಮದುವೆಯ ಮೆಹೆಂದಿ ಕಾರ್ಯಕ್ರಮದ ದಿನ ಆಗಮಿಸಿದ್ದ. ಹಮೀದ್ ಕೂಡ ಇದೇ ಮದುವೆಗೆ ಆಗಮಿಸಿದ್ದ. ಆರೋಪಿ ಹಮೀದ್ ಸಂತ್ರಸ್ತ ಬಾಲಕನನ್ನು ಪುಸಲಾಯಿಸಿ ಹೊರಗಡೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ . ಬಾಲಕ ಈ ವಿಚಾರ ಮನೆಯವರಿಗೆ ತಿಳಿಸಿದ್ದೂ ಮನೆಯವರು ವಿಟ್ಲ ಪೊಲೀಸ್ ಠಾಣೆಗೆ ವಿರುದ್ಧ ದೂರು ನೀಡಿದ್ದು, ಈ ಕುರಿತು ವಿಟ್ಲ ಠಾಣೆಯಲ್ಲಿ ಭಾನುವಾರದಂದು ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.