ವಿಟ್ಲ: ಕೋಡಿ ನಿವಾಸಿ ದಿ.ವೆಂಕಟೇಶ್ ಶೆಟ್ಟಿಗಾರ್ ರವರ ಪತ್ನಿ ಸೇಸಮ್ಮ ಶೆಟ್ಟಿಗಾರ್ (75) ರವರು ಆ.24 ರಂದು ನಿಧನರಾದರು.

ಸೇಸಮ್ಮ ರವರು ಕಳೆದ ಒಂದು ತಿಂಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೇ ಇಂದು ಚಿಕಿತ್ಸೆ ಫಲಕಾರಿಯಾಗದೇ ವಿಟ್ಲದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ವಿಟ್ಲ ವಲಯ ಧರ್ಮಸ್ಥಳ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಜನಾರ್ಧನ ಪದ್ಮಶಾಲಿ, ಪವರ್ ಗ್ರಿಡ್ ಕಾರ್ಪೋರೇಷನ್ ನ ಹಿರಿಯ ಅಧಿಕಾರಿ ಗಣೇಶ್ ಶೆಟ್ಟಿಗಾರ್, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನವೀನ್ ಕುಮಾರ್ ಸಹಿತ 5 ಪುತ್ರರು, 2 ಪುತ್ರಿಯರನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.



























