ಬಂಟ್ವಾಳ: ತಾಲೂಕು ಕೇಪು ಗ್ರಾಮ ಪಂಚಾಯತ್ ನಲ್ಲಿ ಕೇಪು ಗ್ರಾಮ ಮಟ್ಟದ ಪುರುಷರ ಮತ್ತು ಮಹಿಳೆಯರ 18 ವರ್ಷ ಮೇಲ್ಪಟ್ಟ ಮುಕ್ತ ಗ್ರಾಮೀಣ ಕ್ರೀಡಾ ಕೂಟವು ಸೆ.11 ರಂದು ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಶಸ್ವಿನಿ ಶಾಸ್ತ್ರಿ ನೆಕ್ಕರೆ ಇವರು ಕ್ರೀಡಾಕೂಟವನ್ನು ಉದ್ಫಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಘವ ಎಸ್ ಸಾರಡ್ಕ, ಗ್ರಾಮ ಪಂಚಾಯತ್ ಪಿಡಿಒ ವಸಂತಿ, ಕಾರ್ಯದರ್ಶಿ ರಾಮ ನಾಯ್ಕ, ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿಗಳು ಹಾಜರಿದ್ದರು.

ಕ್ರೀಡಾಕೂಟದಲ್ಲಿ ಮಹಿಳೆಯರ ಖೋಖೋ ಪಂದ್ಯಾಟದಲ್ಲಿ ನೀರ್ಕಜೆ ಪ್ರೆಂಡ್ಸ್ ತಂಡವು ಪ್ರಥಮ ಹಾಗೂ ಕೇಪು ತಂಡವು ದ್ವಿತೀಯ ಸ್ಥಾನ ಪಡೆದಿದೆ.
ಪುರುಷರ ಖೋಖೋ ಪಂದ್ಯಾಟದಲ್ಲಿ ನೀರ್ಕಜೆ ತಂಡವು ಪ್ರಥಮ ಹಾಗೂ ಶ್ರೀದುರ್ಗಾ ಮಿತ್ರ ವೃಂದ ಮೈರ ತಂಡವು ದ್ವಿತೀಯ ಸ್ಥಾನ ಪಡೆದಿದೆ. ಮಹಿಳೆಯರ ಕಬಡ್ಡಿ ಪಂದ್ಯಾಟದಲ್ಲಿ ಕೇಪು ತಂಡವು ಪ್ರಥಮ ಹಾಗೂ ಕೋಡಂದೂರು ತಂಡವು ದ್ವಿತೀಯ ಸ್ಥಾನವನ್ನು ಪಡೆದಿದೆ.

ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ತುಳುನಾಡ ಫೈಟರ್ಸ್ ಕೇಪು ತಂಡವು ಪ್ರಥಮ ಹಾಗೂ ದಿವ್ಯಶಕ್ತಿ ಕುದ್ದುಪದವು ತಂಡವು ದ್ವಿತೀಯ ಸ್ಥಾನವನ್ನು ಪಡೆದಿದೆ. ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಪುಣಚ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಜನಾರ್ಧನ ಭಟ್ ಅಮೈ, ಜಯಶ್ರೀ ಕೋಡಂದೂರು, ತಾರನಾಥ ಆಳ್ವ ಇವರು ಉಪಸ್ಥಿತರಿದ್ದರು. ಅತಿಥಿಗಳಾಗಿ ಭಾಗವಹಿಸಿದ ಪುಣಚ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಜನಾರ್ಧನ ಭಟ್ ಅಮೈ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಅತಿಥಿಗಳು ಬಹುಮಾನ ವಿತರಿಸಿದರು. ಈ ಕ್ರೀಡಾಕೂಟಕ್ಕೆ ತೀರ್ಪುಗಾರರಾಗಿ ಸುರೇಶ್ ಶೆಟ್ಟಿ ಪಡಿಬಾಗಿಲು, ಉದಯಕೃಷ್ಣ ಭಟ್, ರವಿ ನಾಯ್ಕ, ದಿನೇಶ್ ಎನ್ ಮತ್ತು ಪುಷ್ಪಾ ಕೇಪು ರವರು ಕಾರ್ಯ ನಿರ್ವಹಿಸಿದರು. ಕಾರ್ಯಕ್ರಮದ ವಿವರಣೆಗಾರರಾಗಿ ಗ್ರಾ.ಪಂ. ಸದಸ್ಯರಾದ ಜಗಜ್ಜೀವನ್ ರಾಮ್ ಶೆಟ್ಟಿ ನಿರ್ವಹಿಸಿದರು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿ ಚಂದ್ರಶೇಖರ್ ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆಗೈದರು.




