ವಿಟ್ಲ: ತಮ್ಮನೋರ್ವ ಅಣ್ಣನನ್ನು ಕೊಲೆಗೈದಿರುವ ಘಟನೆ ವಿಟ್ಲದ ಮಂಗಿಲಪದವು ಬನಾರಿ ಎಂಬಲ್ಲಿ ನಡೆದಿದೆ.

ಬನಾರಿ ಕೊಡಂಗೆ ನಿವಾಸಿ ಸೀನಪ್ಪ ದೇವಾಡಿಗ ರವರ ಪುತ್ರ ಗಣೇಶ್ (52) ಸಾವನ್ನಪ್ಪಿದ್ದು, ಮತ್ತೋರ್ವ ಪುತ್ರ ಪದ್ಮನಾಭ (48) ಕೊಲೆ ಮಾಡಿದ್ದೆನ್ನಲಾಗಿದೆ.
ಜಾಗದ ವಿಚಾರವಾಗಿ ಹಲವು ಸಮಯದಿಂದ ನಡೆಯುತ್ತಿದ್ದ ಸಹೋದರರ ನಡುವಿನ ಗಲಾಟೆ ಕೊಲೆಯ ಮೂಲಕ ಅಂತ್ಯ ಕಂಡಿದೆ.

ಸಹೋದರಿಬ್ಬರು ಕುಡಿದು ಮನೆಯಲ್ಲಿ ಆಗಿಂದಾಗ ಗಲಾಟೆ ನಡೆಸುತ್ತಿದ್ದು, ಒಂದು ತಿಂಗಳ ಹಿಂದೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮಂಗಳವಾರ ರಾತ್ರಿಯೂ ಗಲಾಟೆ ನಡೆದಿದೆ ಎನ್ನಲಾಗಿದ್ದು, ಬುಧವಾರ ಕೊಲೆಯಾಗಿದ್ದ ಬಗ್ಗೆ ವಿಟ್ಲ ಠಾಣೆಗೆ ದೂರು ಬಂದಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿ, ತನಿಖೆ ಕೈಗೆತ್ತಿಕೊಂಡಿದ್ದು, ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
