ಬಂಟ್ವಾಳ: ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಂಟ್ವಾಳ ಜೈನರಪೇಟೆ ನಿವಾಸಿ ಸುಲೈಮಾನ್ (32) ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಸುಲೈಮಾನ್ ಪತ್ನಿ ಮನೆಯಾದ ವಿಟ್ಲದಲ್ಲಿ ಗ್ಲಾಸ್ ಜಖಂ ಆದ ಡೈನಿಂಗ್ ಟೇಬಲ್ ಇದ್ದು, ಅದನ್ನು ಪಿತ್ತಲಗುಡ್ಡೆಯ ಮಹಿಳೆಗೆ ನೀಡಬೇಕೆಂದು ತೀರ್ಮಾನಿಸಿ ಫೆ.18 ರಂದು ಮಧ್ಯಾಹ್ನ ಸುಲೈಮಾನ್ ಪಿತ್ತಲಗುಡ್ಡೆಗೆ ಹೋಗಿ ಫಾತಿಮತ್ ಜೊಹರಾ ರವರಲ್ಲಿ “ನನ್ನ ಪತ್ನಿ ಮನೆಯಾದ ವಿಟ್ಲದಲ್ಲಿ ಡೈನಿಂಗ್ ಟೇಬಲ್ ಇದ್ದು, ಅದನ್ನು ಬಾಡಿಗೆ ವಾಹನ ಮಾಡಿಕೊಂಡು ನೀವು ಮನೆಗೆ ತೆಗೆದುಕೊಂಡು ಬನ್ನಿ. ಬಿಸಿರೋಡ್ ನಿಂದ ವಾಹನ ಮಾಡಿಕೊಂಡು ಹೋದಲ್ಲಿ ಬಾಡಿಗೆ ಜಾಸ್ತಿಯಾಗುತ್ತದೆ. ಅದಕ್ಕೆ ವಿಟ್ಲದಿಂದಲೇ ವಾಹನ ಬಾಡಿಗೆ ಮಾಡಿಕೊಂಡು ಡೈನಿಂಗ್ ಟೇಬಲ್ ತನ್ನಿ” ಎಂದು ಹೇಳಿದಾಗ ಮನೆಯಲ್ಲಿದ್ದ ಮಹಿಳೆಯ ರವರ ಅಳಿಯ ನಿಸಾರ್ ನು “ಬಾಡಿಗೆ ವಾಹನ ಮಾಡಿಕೊಂಡು ತರಲು ನೀನ್ಯಾರು..!!? ಎಂದು ಅವಾಚ್ಯವಾಗಿ ಬೈದಿದ್ದು, ಆಗ ಸುಲೈಮಾನ್ ನೀನ್ಯಾಕೆ ಬೈಯ್ಯುತ್ತಿಯಾ ಎಂದು ಕೇಳಿದ್ದಕ್ಕೆ ನಿಸಾರ್ ನು ಒಂದು ಚೂರಿಯನ್ನು ತೆಗೆದುಕೊಂಡು ಬಂದು ತಿವಿಯಲು ಪ್ರಯತ್ನಿಸಿದಾಗ ಮಹಿಳೆ ಮತ್ತು ಇತರರು ಚೂರಿಯನ್ನು ತೆಗೆದುಕೊಂಡಿದ್ದು, ಆಗ ನಿಸಾರ್ ನು ಒಂದು ಕತ್ತರಿಯನ್ನು ತೆಗೆದುಕೊಂಡು ನಿನ್ನನ್ನು ಇದೇ ಕತ್ತರಿಯಿಂದ ತಿವಿದು ಕೊಲ್ಲುತ್ತೇನೆ ಎಂದು ಹೇಳಿ ಕತ್ತರಿಯಿಂದ ಸುಲೈಮಾನ್ ಬಲಬದಿ ಕುತ್ತಿಗೆಯ ಬಳಿ ಭುಜದ ಬಳಿ ತಿವಿದಿದ್ದು, ಆಗ ಸುಲೈಮಾನ್ ನೆಲಕ್ಕೆ ಬಿದ್ದಿದ್ದು, ಆಗ ನಿಸಾರ್ ನು ನಿನ್ನನ್ನು ಸಾಯಿಸದೇ ಬಿಡುವುದಿಲ್ಲವೆಂದು ಹೇಳಿ ಕತ್ತರಿಯನ್ನು ಅಲ್ಲಿಯೇ ಬಿಸಾಡಿ ಹೋಗಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ನಿಸಾರ್ ನ ವಿರುದ್ಧ ಬಂಟ್ವಾಳ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..