ಸುಪ್ರಜಿತ್ ಫೌಂಡೇಶನ್ ಬೆಂಗಳೂರು ಇದರ ಸ್ಥಾಪಕಾಧ್ಯಕ್ಷರು ಹಾಗೂ ವಿಠಲ ಸುಪ್ರಜಿತ್ ಐಟಿಐನ ಗೌರವಾಧ್ಯಕ್ಷರಾದ ಅಜಿತ್ ಕುಮಾರ್ ರೈ ರವರು ಇಂದು ವಿಠಲ ವಿದ್ಯಾಸಂಸ್ಥೆಗೆ ಭೇಟಿ ನೀಡಿದರು.

ಭೇಟಿ ನೀಡಿದ ಅವರು ವಿಠಲ ಸುಪ್ರಜಿತ್ ಐಟಿಐನ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಈ ಸಂವಾದ ಕಾರ್ಯಕ್ರಮದ ಸಂದರ್ಭದಲ್ಲಿ ಸುಪ್ರಜಿತ್ ಐಟಿಐನ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳು, ಉಚಿತ ಸಮವಸ್ತ್ರ ಹಾಗೂ ವಿದ್ಯಾರ್ಥಿ ವೇತನ ಕೊಡುವುದಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ವಿಠಲ ವಿದ್ಯಾಸಂಸ್ಥೆಯ ಸಂಚಾಲಕರಾದ ಎಲ್ ಎನ್ ಕೂಡೂರು, ಸದಸ್ಯರಾದ ನಿತ್ಯಾನಂದ ನಾಯಕ್, ವಿಠಲ ಸುಪ್ರಜಿತ್ ಐಟಿಐನ ಸಂಚಾಲಕರಾದ ಆಲ್ಫಾನ್ಸೋ ಸಿಲ್ವೆಸ್ಟರ್ ಮಸ್ಕರೇನ್ಹಸ್, ಕಾರ್ಯದರ್ಶಿಗಳಾದ ಶ್ರೀಪ್ರಕಾಶ್, ಆಡಳಿತಾಧಿಕಾರಿ ಪ್ರಶಾಂತ್ ಚೊಕ್ಕಾಡಿ, ಕಾಲೇಜಿನ ಪ್ರಾಂಶುಪಾಲರಾದ ಆದರ್ಶ್ ಎ ಎಸ್, ಐಟಿಐ ಪ್ರಾಂಶುಪಾಲರಾದ ರಮೇಶ್ ರೈ, ಸುಪ್ರಜಿತ್ ಐಟಿಐನ ಕಿರಿಯ ತರಬೇತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ರಮೇಶ್ ರೈ ಸ್ವಾಗತಿಸಿ, ನಳಿನಿ ವಂದಿಸಿದರು.

