ಬಂಟ್ವಾಳ: ಮಧು ಬಂಗೇರ ಕಲ್ಲಡ್ಕ ಸಾರಥ್ಯದ ತುಳುವೆರೆ ತುಡರ್ ಕಲಾತಂಡದ “ದಶಮಾನೋತ್ಸವ”ದ ಸಂಭ್ರಮ, ತಂಡದ ಜನ ಮೆಚ್ಚಿದ ಕೊಪ್ಪರಿಗೆ ನಾಟಕದ ಶತದಿನೋತ್ಸವದ ಸಡಗರ, ದಶ ವರುಷದ ಶತ ಸಂಭ್ರಮ ಕಾರ್ಯಕ್ರಮ ಮಾ.12 ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಬಯಲು ರಂಗಮಂದಿರ ಕಲ್ಲಡ್ಕದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ತುಡರ್ ಕ್ರಿಯೇಷನ್ಸ್ ಅರ್ಪಿಸುವ ಮಧು ಬಂಗೇರ ರವರ ಕಥೆ, ಸಂಭಾಷಣೆ, ನಿರ್ದೇಶನದಲ್ಲಿ ಜೀ ಕನ್ನಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ಯುವಾ ಶೆಟ್ಟಿ ಅಭಿನಯದ ‘ಕಾಯರ್ ಮಾರ್’ ಕಿರುಚಿತ್ರದ ಬಿಡುಗಡೆ ಹಾಗೂ ಕಲ್ಲಡ್ಕದಲ್ಲಿ ಪ್ರಪ್ರಥಮ ಬಾರಿಗೆ ಪ್ರಸಿದ್ದ ರಂಗ ನಿರ್ದೇಶಕರನ್ನೊಳಗೊಂಡ ಅಭಿನಯ ಕಲಿಕಾ ಸಂಸ್ಥೆ “ತುಡರ್ ಕ್ರಿಯೇಷನ್ಸ್ ರಂಗ ಅಧ್ಯಯನ ಕೇಂದ್ರ ಕಲ್ಲಡ್ಕ’ ಇದರ ಲೋಕಾರ್ಪಣೆಯು ನಡೆಯಲಿದೆ.
ಜೀ ಕನ್ನಡ ಕಾಮಿಡಿಗಳು ರಿಯಾಲಿಟಿ ಶೋ ಕಲಾವಿದರಾದ ಹಿತೇಶ್ ಬೆಳ್ತಂಗಡಿ, ರಾಧೇಶ್ ಶೆಣೈ ಉಡುಪಿ, ಧೀರಜ್ ನೀರುಮಾರ್ಗ, ಯುವಾಶೆಟ್ಟಿ ಮೂಡಬಿದ್ರೆ, ಚಲನ ಚಿತ್ರ ನಾಯಕ ನಟರಾದ ಪ್ರಜ್ಣೇಶ್ ಶೆಟ್ಟಿ, ಗಟ್ಟಿಮೇಳ ದಾರವಾಹಿಯ ನಟ ನಟಿಯರು ಹಾಗೂ ಗಣ್ಯ ಅತಿಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ಥಳೀಯ ಪ್ರತಿಭೆಗಳ ಗಾನ ನಾಟ್ಯ ವೈಭವ, ಸಾಧಕರಿಗೆ ಸನ್ಮಾನ, ಕೊಪ್ಪರಿಗೆ ನಾಟಕದ 106ನೇ ರಂಗ ಪ್ರಯೋಗ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..