ವಿಧಾನಸಭಾ ಚುನಾವಣೆಗೆ ಮಿಷನ್ 150 ಹೊತ್ತಿರುವ ಬಿಜೆಪಿ, ತನ್ನ ಟಾರ್ಗೆಟ್ ರೀಚ್‌ಗಾಗಿ ಸಮರಾಭ್ಯಾಸ ನಡೆಸುತ್ತಿದೆ. ಪ್ರತಿ ಕ್ಷೇತ್ರವೂ ಕುರುಕ್ಷೇತ್ರವಾಗಿ ಪರಿಗಣಿಸಿರುವ ಕಮಲ ಪಡೆ, ಗೆಲ್ಲುವ ಕುದುರೆಗಾಗಿ ಹುಡುಕಾಟ ನಡೆಸುತ್ತಿದೆ.
ಈ ಹೊತ್ತಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಸಿಡಿಸಿದ ಟಿಕೆಟ್ ಬಾಂಬ್‌ನಿಂದ ಬಿಜೆಪಿಯಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಅಲ್ಲದೆ, ಮತ್ತೊಮ್ಮೆ ಶಾಸನ ಸಭೆ ಸೇರುವ ಕನಸು ಕಾಣುತ್ತಿರುವ ಕೆಲ ಕೇಸರಿ ಕಲಿಗಳನ್ನ ಆತಂಕಕ್ಕೆ ತಳ್ಳಿದೆ.
ಬಿಎಸ್‌ವೈ ಹೇಳಿದ್ದೇನು..!!??
ಯಾರು ಬರುತ್ತಾರೆ ಅವರಿಗೆ ಸ್ವಾಗತ ಕೋರುತ್ತೇವೆ. ಯಾರು ಪಕ್ಷ ಬಿಟ್ಟು ಹೋಗುತ್ತಾರೋ ಅವರು ಸಂತೋಷದಿಂದ ಹೋಗಲಿ. ಸಕ್ತ ವಿಧಾನಸಭೆ ಎಲೆಕ್ಷನ್‌ನಲ್ಲಿ ನಾಲ್ಕಾರು ಜನ ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ. ಉಳಿದಂತೆ ಎಲ್ಲ ಶಾಸಕರಿಗೆ ಟಿಕೆಟ್ ಸಿಗಲಿದೆ ಎಂದು ಹೇಳಿದ್ದಾರೆ.
2023ರಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಬಿಜೆಪಿ ಯತ್ನಿಸ್ತಿದೆ. ಟಿಕೆಟ್ ಯಾರಿಗೆ ಕೊಡಬೇಕು ಅನ್ನೋ ಬಗ್ಗೆಯೂ ಚರ್ಚೆ ಆಗ್ತಿದೆ. ವಿಧಾನಸಭಾ ಚುನಾವಣೆಯ ಹೊತ್ತಲ್ಲೆ ಟಿಕೆಟ್ ನೀಡುವ ಮಾನದಂಡದ ಕುರಿತು ಊಹಪೋಹಗಳಿಗೆ ರೆಕ್ಕೆಪುಕ್ಕ ಬಂದಿದೆ.
ಸದ್ಯ ಯಾರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ಅನ್ನೋದು ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ. ಗೆಲುವೊಂದೆ ಮಾನದಂಡ ಅಂತ ಹೈಕಮಾಂಡ್ ಈಗಾಗಲೇ ಕಡ್ಡಿಮುರಿದಂತೆ ಹೇಳಿದ್ದು, ಪ್ರತಿ ಕ್ಷೇತ್ರಕ್ಕೂ ಅಳೆದು ತೂಗಿ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಟಿಕೆಟ್ ಹಂಚಿಕೆ ಪಕ್ಕಾ ಆಗಿದೆ. ಒಟ್ಟಾರೆ, ಮಾಜಿ ಸಿಎಂ ಯಡಿಯೂರಪ್ಪ ಕೊಟ್ಟ ಹೇಳಿಕೆ ಕೆಲ ಬಿಜೆಪಿ ಶಾಸಕರಿಗೆ ಖುಷಿ ತಂದಿದ್ರೆ, ಇನ್ನೂ ಕೆಲವರಿಗೆ ಶಾಕ್ ಆಗಿದೆ. ನಾಲ್ಕಾರು ಹಾಲಿ ಶಾಸಕರು ಯಾರು ಅನ್ನೋ ಬಗ್ಗೆ ಚರ್ಚೆ ಬಿಜೆಪಿ ಪಡಸಾಲೆಯಲ್ಲಿ ಉದ್ಭವಿಸಿದೆ.