Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಸಚಿವ ಸ್ಥಾನ ಸಿಗಲೆಂದು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ವಿಶೇಷ ಪೂಜೆ..!!

    ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಸಚಿವ ಸ್ಥಾನ ಸಿಗಲೆಂದು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ವಿಶೇಷ ಪೂಜೆ..!!

    ಸುಳ್ಯ ಪೊಲೀಸ್ ಠಾಣೆಗೆ ಹೆಡ್ ಕಾನ್ಸ್ಟೇಬಲ್ ಆಗಿ ಸ್ಕರಿಯ ಕರ್ತವ್ಯಕ್ಕೆ ಹಾಜರು..!!

    ಸುಳ್ಯ ಪೊಲೀಸ್ ಠಾಣೆಗೆ ಹೆಡ್ ಕಾನ್ಸ್ಟೇಬಲ್ ಆಗಿ ಸ್ಕರಿಯ ಕರ್ತವ್ಯಕ್ಕೆ ಹಾಜರು..!!

    ಶಿಶಿಲದಲ್ಲಿ ಸಾವಿರಾರು ಮೀನುಗಳ ಮಾರಣ ಹೋಮ ; ಕಾಪರ್ ಸಲ್ಫೇಟ್ ಬಳಸಿ ಮೀನು ಹಿಡಿಯಲು ಯತ್ನ..!!

    ಶಿಶಿಲದಲ್ಲಿ ಸಾವಿರಾರು ಮೀನುಗಳ ಮಾರಣ ಹೋಮ ; ಕಾಪರ್ ಸಲ್ಫೇಟ್ ಬಳಸಿ ಮೀನು ಹಿಡಿಯಲು ಯತ್ನ..!!

    ಮುಳಿಯ ಬೆಂಗಳೂರಿನಲ್ಲಿ “ಡೈಮಂಡ್ ಫೆಸ್ಟ್” – ಅತ್ಯಾಕರ್ಷಕ ಉಡುಗೊರೆಗಳನ್ನು ಗೆಲ್ಲುವ ಅವಕಾಶ..!

    ಮುಳಿಯ ಬೆಂಗಳೂರಿನಲ್ಲಿ “ಡೈಮಂಡ್ ಫೆಸ್ಟ್” – ಅತ್ಯಾಕರ್ಷಕ ಉಡುಗೊರೆಗಳನ್ನು ಗೆಲ್ಲುವ ಅವಕಾಶ..!

    ಪುತ್ತೂರು: ಮುಳಿಯ ಗೋಲ್ಡ್ & ಡೈಮಂಡ್ಸ್‌ ಮಳಿಗೆಯಲ್ಲಿ ಮುಳಿಯ’ಸ್ ಟೈಮ್ ಝೋನ್ ವಾಚ್ ಕೌಂಟರ್ ಆರಂಭ..!!

    ಪುತ್ತೂರು: ಮುಳಿಯ ಗೋಲ್ಡ್ & ಡೈಮಂಡ್ಸ್‌ ಮಳಿಗೆಯಲ್ಲಿ ಮುಳಿಯ’ಸ್ ಟೈಮ್ ಝೋನ್ ವಾಚ್ ಕೌಂಟರ್ ಆರಂಭ..!!

    ಡಿಕೆಶಿಯಿಂದ ಯಶಸ್ವಿ ಸರ್ಕಾರ, ಅಶೋಕ್‌ ರೈಯವರಿಗೆ ಸಚಿವ ಸ್ಥಾನಕ್ಕಾಗಿ ಇಂದು ಕಾಂಗ್ರೆಸ್‌ನಿಂದ ಸರ್ವಧರ್ಮ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ..!!

    ಡಿಕೆಶಿಯಿಂದ ಯಶಸ್ವಿ ಸರ್ಕಾರ, ಅಶೋಕ್‌ ರೈಯವರಿಗೆ ಸಚಿವ ಸ್ಥಾನಕ್ಕಾಗಿ ಇಂದು ಕಾಂಗ್ರೆಸ್‌ನಿಂದ ಸರ್ವಧರ್ಮ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಸುಮಾರು 30 ವರುಷಗಳಿಂದ ಜಿಡೆಕಲ್ಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ‘ಪುತ್ತೂರು ಹಾಲು ಶೀಥಲೀಕರಣ ಕೇಂದ್ರ’ದ ಪ್ರಕ್ರಿಯೆಗಳು ಸ್ಥಗಿತ : ಇತಿಹಾಸ ಪುಟ ಸೇರುವುದೇ ಬೃಹತ್ ಸಂಸ್ಥೆ

June 2, 2023
in ಪುತ್ತೂರು, ವಾಣಿಜ್ಯ
0
ಸುಮಾರು 30 ವರುಷಗಳಿಂದ ಜಿಡೆಕಲ್ಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ‘ಪುತ್ತೂರು ಹಾಲು ಶೀಥಲೀಕರಣ ಕೇಂದ್ರ’ದ ಪ್ರಕ್ರಿಯೆಗಳು ಸ್ಥಗಿತ : ಇತಿಹಾಸ ಪುಟ ಸೇರುವುದೇ ಬೃಹತ್ ಸಂಸ್ಥೆ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಪುತ್ತೂರು : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ವತಿಯಿಂದ ಪುತ್ತೂರಿನ ಜಿಡೆಕಲ್ಲಿನಲ್ಲಿ ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ‘ಪುತ್ತೂರು ಹಾಲು ಶೀಥಲೀಕರಣ ಕೇಂದ್ರ’ವು ಮೇ.31ಕ್ಕೆ ಎಲ್ಲಾ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಿದ್ದು, ಪುತ್ತೂರಿನ ಬೃಹತ್ ಸಂಸ್ಥೆಯೊಂದು ಇತಿಹಾಸದ ಪುಟ ಸೇರುವ ಲಕ್ಷಣಗಳು ಗೋಚರಿಸುತ್ತಿದೆ.

Advertisement
Advertisement

Advertisement

ಪ್ರಾರಂಭದಲ್ಲಿ ಎಪಿಎಂಸಿ ಪ್ರಾಂಗಣದೊಳಗೆ ಕಾರ್ಯಾಚರಿಸುತ್ತಿದ್ದ ದ.ಕ ಸಹಕಾರಿ ಹಾಲು ಒಕ್ಕೂಟದ ಶೀಥಲೀಕರಣ ಕೇಂದ್ರವು 1993 ರಲ್ಲಿ ಜಿಡೆಕಲ್ಲಿನಲ್ಲಿ ಸ್ವಂತ ನಿವೇಶನದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡು ಸುದೀರ್ಘ 30 ವರ್ಷಗಳ ಇತಿಹಾಸವನ್ನು ಈ ಕೇಂದ್ರವು ಹೊಂದಿದೆ.

ವಿಶಾಲವಾಗಿ ಸುಮಾರು ಆರು ಎಕರೆ ಸ್ವಂತ ನಿವೇಶನವನ್ನು ಹೊಂದಿದೆ. ಇಲ್ಲಿ ದಿನವೊಂದಕ್ಕೆ ಸುಮಾರು 5೦,೦೦೦ ಲೀಟರ್ ಹಾಲು ಶೀಥಲಿಕರಣಗೊಳಿಸುವ ಮೂರು ಬೃಹತ್ ಟ್ಯಾಂಕ್‌ಗಳು, ಇದಕ್ಕೆ ಪೂರಕವಾದ ಯಂತ್ರೋಪಕರಣಗಳು, ಎರಡು ಬೃಹತ್ ಜನರೇಟರ್, ಕಂಪ್ರೇಷರ್, ಲ್ಯಾಬ್‌ಗಳನ್ನು ಹೊಂದಿದೆ.

ಪ್ರಾರಂಭದಲ್ಲಿ 3೦ ಮಂದಿ ಸಿಬ್ಬಂದಿಗಳನ್ನು ಹೊಂದಿತ್ತು. ನಂತರ ಇಳಿಕೆಯಾಗುತ್ತಾ ಪ್ರಸ್ತುತ ದಿನಗಳಲ್ಲಿ 17 ಮಂದಿ ಸಿಬ್ಬಂದಿಗಳು ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಕೇವಲ 4 ಮಂದಿ ಮಾತ್ರ ಖಾಯಂ ಸಿಬಂದಿಗಳಾಗಿದ್ದಾರೆ. ಉಳಿದ 13 ಮಂದಿ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೇಂದ್ರವು ಪ್ರಾರಂಭಗೊಂಡ ದಿನಗಳಲ್ಲಿ ಪುತ್ತೂರು, ಸುಳ್ಯ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳ 70 ಹಾಲು ಉತ್ಪಾದಕರ ಸಹಕಾರಿ ಸಂಘಗಳಿಂದ ಸುಮಾರು 6೦,೦೦೦ ಲೀಟರ್ ಹಾಲು ಪುತ್ತೂರು ಕೇಂದ್ರಕ್ಕೆ ಸರಬರಾಜು ಆಗಿ ಇಲ್ಲಿ ಹಾಲು ಶೀಥಲೀಕರಣಗೊಂಡು ಮಂಗಳೂರಿನ ದ.ಕ ಹಾಲು ಒಕ್ಕೂಟಕ್ಕೆ ಸರಬರಾಜು ಆಗುತ್ತಿತ್ತು.

11 ರೂಟ್‌ಗಳ ಮೂಲಕ ವಿವಿಧ ವಾಹನಗಳಲ್ಲಿ ಸಹಕಾರಿ ಸಂಘಗಳಿಂದ ಹಾಲು ಸಂಗ್ರಹಗೊಂಡು ಶೀಥಲೀಕರಣ ಕೇಂದ್ರಕ್ಕೆ ಸರಬರಾಜಾಗಿ ಇಲ್ಲಿ ಶೀಥಲಿಕರಣ ಕಾರ್ಯಗಳು ನಡೆದು ಟ್ಯಾಂಕರ್‌ಗಳ ಮೂಲಕ ಮಂಗಳೂರು ಒಕ್ಕೂಟಕ್ಕೆ ಸರಬರಾಜಾಗುತ್ತಿತ್ತು. ಕೆಲ ವರ್ಷಗಳಿಂದ ಜಿಲ್ಲೆಯ ಹಲವು ಸಹಕಾರಿ ಸಂಘ ಸಂಸ್ಥೆಗಳ ಮೂಲಕ ಆಧುನಿಕ ತಂತ್ರಜ್ಞಾನಾಧಾರಿತ ಬಲ್ಕ್ ಮಿಲ್ಕ್ ಕೂಲರ್‌ಗಳು ಪ್ರಾರಂಭಗೊಂಡಿರುವ ಹಿನ್ನೆಲೆಯಲ್ಲಿ ಜಿಡೆಕಲ್ಲಿನ ಕೇಂದ್ರಕ್ಕೆ ಸರಬರಾಜಾಗುವ ಹಾಲಿನ ಪ್ರಮಾಣ ಇಳಿಮುಖವಾಗುತ್ತಾ ಸಾಗಿದೆ. ಸ್ಥಗಿತಗೊಳಿಸುವ ಕೊನೇ ದಿನದಲ್ಲಿಯೂ 15,೦೦೦ ಲೀಟರ್ ಹಾಲು ಸಂಗ್ರಹಗೊಂಡು ಶೀಥಲೀಕರಣಗೊಂಡು ಮಂಗಳೂರಿನ ಒಕ್ಕೂಟಕ್ಕೆ ಸರಬರಾಜು ಮಾಡುತ್ತಿತ್ತು.

ವಿಶಾಲವಾಗಿ ಆರು ಎಕರೆ ನಿವೇಶನ ಹಾಗೂ ಸುತ್ತು ಆವರಣಗೋಡೆ ಹೊಂದಿರುವ ಕೇಂದ್ರದಲ್ಲಿಯೇ ಹಾಲು ಪ್ಯಾಕಿಂಗ್ ಹಾಗೂ ಪೌಡರ್ ಪ್ಲಾಂಟ್ ನಿರ್ಮಾಣಕ್ಕಾಗಿ ನೀಲ ನಕಾಶೆ ಸಿದ್ದಪಡಿಸಿ, ಒಕ್ಕೂಟದ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಎರಡು ಭಾರಿ ಗುದ್ದಲಿಪೂಜೆ ನಡೆದಿತ್ತು. ಅದಕ್ಕಾಗಿ ಒಕ್ಕೂಟದಿಂದ ಅನುದಾನವನ್ನು ನಿಗಧಿಪಡಿಸಲಾಗಿತ್ತು. ಆದರೆ ಆ ಯೋಜನೆಗಳು ಮಾತ್ರ ಇನ್ನೂ ಸಾಕಾರಗೊಂಡಿಲ್ಲ ಎಂಬ ಮಾಹಿತಿಗಳು ಲಭ್ಯವಾಗಿದೆ.

ಈ ಕೇಂದ್ರದಲ್ಲಿ ಮೇ.31ರಂದು ಎಲ್ಲಾ ರೀತಿಯ ಶೀಥಲೀಕರಣ ಕಾರ್ಯಗಳನ್ನು ಮುಕ್ತಾಯಗೊಳಿಸಿ ಜೂ.1ರಿಂದ ಸಂಪೂರ್ಣ ಸ್ಥಗಿತಗೊಳಿಸಿದೆ.

ಇಲ್ಲಿನ ಸಿಬ್ಬಂದಿಗಳನ್ನು ಮಂಗಳೂರಿನ ಒಕ್ಕೂಟದಲ್ಲಿ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಂದ ಸೂಚನೆಗಳು ಬಂದಿದೆ. ಇದರಿಂದಾಗಿ ಇಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕನಿಷ್ಠ ವೇತನದಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳು ಸಂಕಷ್ಟ ಪಡುವಂತಾಗಿದೆ. ಜೊತೆಗೆ ಸಹಕಾರಿ ಸಂಘಗಳಿಂದ 11 ರೂಟ್‌ಗಗಳ ಮೂಲಕ ಹಾಲು ಸರಬರಾಜು ಮಾಡುತ್ತಿರುವ ಖಾಸಗಿ ವಾಹನಗಳ ಮಾಲಕರು ಬರ ಎದುರಿಸುವಂತಾಗಿದೆ.

ಸಿಬ್ಬಂದಿಗಳನ್ನು ಕೈ ಬಿಡುವುದಿಲ್ಲ. ಅವರಿಗೂ ಉದ್ಯೋಗ ನೀಡಲಾಗುವುದು – ಎಸ್.ಬಿ. ಜಯರಾಮ ರೈ

ಸಹಕಾರಿ ಸಂಘಗಳಿಂದ ಸಂಗ್ರಹಿಸಿದ ಹಾಲನ್ನು ಜಿಡೆಕಲ್ಲು ಕೇಂದ್ರಕ್ಕೆ ಸಾಗಿಸಿ ಅಲ್ಲಿ ಶೀಥಲೀಕಣಗೊಂಡು ಮಂಗಳೂರಿಗೆ ಸರಬರಾಜು ಮಾಡುಬೇಕಾಗಿರುವುದರಿಂದ ಒಕ್ಕೂಟಕ್ಕೆ ಅಧಿಕ ಹೊರೆ ಬೀಳುತ್ತದೆ. ಅಲ್ಲದೆ ಹಾಲಿನ ಸಂಗ್ರಹಣೆಯೂ ಗಣನೀಯವಾಗಿ ಇಳಿಕೆಯಾಗಿದೆ. ಇದಕ್ಕಾಗಿ ಸುಳ್ಯ, ಪುತ್ತೂರು, ಬೆಳ್ತಗಂಡಿಗಳಲ್ಲಿ ವಿವಿಧ ಕಡೆಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಬಿಎಂಸಿ ಪ್ರಾರಂಭಿಸಿಲಾಗಿದ್ದು, ಅಲ್ಲಿನ ಸುತ್ತ ಮುತ್ತಲಿನ 7 ಸಂಘಗಳಿಂದ ಹಾಲು ಅಲ್ಲಿ ಸಂಗ್ರಹಗೊಂಡು ಶೀಥಲೀಕರವಾಗಿ ಟ್ಯಾಂಕರ್‌ನಲ್ಲಿ ನೇರವಾಗಿ ಒಕ್ಕೂಟಕ್ಕೆ ಸರಬರಾಜಾಗುವ ಮೂಲಕ ನಿರ್ವಹಣಾ ವೆಚ್ಚ ಕಡಿಮೆಯಾಗುತ್ತದೆ. ಇದಕ್ಕಾಗಿ ಸ್ಥಗಿತಗೊಳಿಸಲಾಗಿದೆ.

ಈಗೀರುವ ಜಿಡೆಕಲ್ಲು ಕೇಂದ್ರದ ವಿಶಾಲ ಜಾಗ ಹೊಂದಿದ್ದು ಇಲ್ಲಿ ಈ ಭಾಗದ ಹಾಲನ್ನು ಇಲ್ಲಿಯೇ ಬಳಸಿಕೊಂಡು ಪೌಡರ್ ಪ್ಲಾಂಟ್ ಹಾಲು ಪ್ಯಾಕೇಟ್ ಪ್ರಾರಂಭಿಸುವ ಯೋಜನೆಗಳಿದ್ದು ಇಲ್ಲಿಂದ ಪ್ಯಾಕೆಟ್ ಹಾಲು ಸುತ್ತ ಮುತ್ತಲಿನ ತಾಲೂಕುಗಳಿಗೆ ಸರಬರಾಜಾಗುವ ಮೂಲಕ ಸಾಗಾಟ ವೆಚ್ಚವೂ ಕಡಿಮೆಯಾಗಲಿದೆ. ಇಲ್ಲಿನ ಖಾಯಂ ಸಿಬ್ಬಂದಿಗಳನ್ನು ಮಂಗಳೂರಿಗೆ ಕರೆಸಿಕೊಳ್ಳಲಾಗಿದೆ. ಗುತ್ತಿಗೆ ಆಧಾರದ ಸಿಬ್ಬಂದಿಗಳನ್ನು ಕೈ ಬಿಡುವುದಿಲ್ಲ. ಅವರಿಗೂ ಉದ್ಯೋಗ ನೀಡಲಾಗುವುದು ಎಂದು ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಉಪಾಧ್ಯಕ್ಷರಾದ ಎಸ್.ಬಿ. ಜಯರಾಮ ರೈ ತಿಳಿಸಿದ್ದಾರೆ.

ಆಡಳಿತ ಮಂಡಳಿಯ ತೀರ್ಮಾನದಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು - ಆಡಳಿತ ನಿರ್ದೇಶಕ ಅಶೋಕ್

ಈ ಕೇಂದ್ರದಲ್ಲಿ ದಿನವೊಂದಕ್ಕೆ 9೦೦೦ ಲೀಟರ್ ಹಾಲು ಮಾತ್ರ ಸಂಗ್ರಹಗೊಂಡು ಶೀಥಲೀಕರಣಗೊಳ್ಳುತ್ತಿದೆ. ಇಲ್ಲಿನ ಯಂತ್ರೋಪಕರಣಗಳು ಸುಮಾರು 45 ವರ್ಷಗಳಷ್ಟು ಹಳೆಯದಾಗಿದೆ. ಈ ಭಾಗದಲ್ಲಿ ಸುಮಾರು 24-25ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಬಿಎಂಸಿ(ಬಲ್ಕ್ ಮಿಲ್ಕ್ ಕೂಲರ್)ನ್ನು ಅಳವಡಿಸಲಾಗಿದ್ದು, ಅಲ್ಲಿಯೇ ಹಾಲು ಶೀಥಲೀಕರಣಗೊಂಡು ಅಲ್ಲಿಂದ ಟ್ಯಾಂಕರ್‌ಗಳ ಮೂಲಕ ನೇರವಾಗಿ ಮಂಗಳೂರಿಗೆ ಸರಬರಾಜಾಗುತ್ತದೆ. ಬಿಎಂಸಿ ಆಗುವ ತನಕ ಇಲ್ಲಿನ ಕೇಂದ್ರವು ಕಾರ್ಯನಿರ್ವಹಿಸುತ್ತಿತ್ತು. ಹೀಗಾಗಿ ಜಿಡೆಕಲ್ಲು ಶೀಥಲೀಕರಣ ಕೇಂದ್ರದ ಆವಶ್ಯಕತೆ ಬೀಳುವುದಿಲ್ಲ. ಆಡಳಿತ ಮಂಡಳಿಯ ತೀರ್ಮಾಣದಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ನಿರ್ದೇಶಕರಾದ ಅಶೋಕ್ ಮಾಹಿತಿ ನೀಡಿದ್ದಾರೆ..

Previous Post

‘ಕಟೀಲ್ ಅವರೇ., ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ’ ; ‘ಬಜರಂಗದಳ’ದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ – ಟ್ವೀಟ್ ಮೂಲಕ ಬಿಜೆಪಿ ಕಾಲೆಳೆದ ಕಾಂಗ್ರೆಸ್

Next Post

ವೀರಕಂಭ : ಮಜಿ ಸರಕಾರಿ ಶಾಲೆಯಲ್ಲಿ ಗೌರವ ಶಿಕ್ಷಕರಾಗಿದ್ದ ಇಬ್ಬರನ್ನು ಹುದ್ದೆಯಿಂದ ಕೈ ಬಿಟ್ಟ ಆರೋಪ : ಶಾಲೆಯಲ್ಲಿ ಜಮಾಯಿಸಿದ ಮಕ್ಕಳ ಪೋಷಕರು

OtherNews

ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಸಚಿವ ಸ್ಥಾನ ಸಿಗಲೆಂದು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ವಿಶೇಷ ಪೂಜೆ..!!
ಪುತ್ತೂರು

ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಸಚಿವ ಸ್ಥಾನ ಸಿಗಲೆಂದು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ವಿಶೇಷ ಪೂಜೆ..!!

May 30, 2026
ಸುಳ್ಯ ಪೊಲೀಸ್ ಠಾಣೆಗೆ ಹೆಡ್ ಕಾನ್ಸ್ಟೇಬಲ್ ಆಗಿ ಸ್ಕರಿಯ ಕರ್ತವ್ಯಕ್ಕೆ ಹಾಜರು..!!
Featured

ಸುಳ್ಯ ಪೊಲೀಸ್ ಠಾಣೆಗೆ ಹೆಡ್ ಕಾನ್ಸ್ಟೇಬಲ್ ಆಗಿ ಸ್ಕರಿಯ ಕರ್ತವ್ಯಕ್ಕೆ ಹಾಜರು..!!

May 30, 2026
ಪುತ್ತೂರು: ಮುಳಿಯ ಗೋಲ್ಡ್ & ಡೈಮಂಡ್ಸ್‌ ಮಳಿಗೆಯಲ್ಲಿ ಮುಳಿಯ’ಸ್ ಟೈಮ್ ಝೋನ್ ವಾಚ್ ಕೌಂಟರ್ ಆರಂಭ..!!
ಪುತ್ತೂರು

ಪುತ್ತೂರು: ಮುಳಿಯ ಗೋಲ್ಡ್ & ಡೈಮಂಡ್ಸ್‌ ಮಳಿಗೆಯಲ್ಲಿ ಮುಳಿಯ’ಸ್ ಟೈಮ್ ಝೋನ್ ವಾಚ್ ಕೌಂಟರ್ ಆರಂಭ..!!

May 30, 2026
ಡಿಕೆಶಿಯಿಂದ ಯಶಸ್ವಿ ಸರ್ಕಾರ, ಅಶೋಕ್‌ ರೈಯವರಿಗೆ ಸಚಿವ ಸ್ಥಾನಕ್ಕಾಗಿ ಇಂದು ಕಾಂಗ್ರೆಸ್‌ನಿಂದ ಸರ್ವಧರ್ಮ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ..!!
Featured

ಡಿಕೆಶಿಯಿಂದ ಯಶಸ್ವಿ ಸರ್ಕಾರ, ಅಶೋಕ್‌ ರೈಯವರಿಗೆ ಸಚಿವ ಸ್ಥಾನಕ್ಕಾಗಿ ಇಂದು ಕಾಂಗ್ರೆಸ್‌ನಿಂದ ಸರ್ವಧರ್ಮ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ..!!

May 30, 2026
ಕುಮಾರಧಾರ ನದಿ ಬಳಿ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರಿಂದ ಸ್ಥಳ ಪರಿಶೀಲನೆ..!
Featured

ಕುಮಾರಧಾರ ನದಿ ಬಳಿ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರಿಂದ ಸ್ಥಳ ಪರಿಶೀಲನೆ..!

May 30, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Featured

ಪುತ್ತೂರು: ಬೆಳ್ತಂಗಡಿಯ ಯುವಕನನ್ನು ಅಪಹರಿಸಿ ಹಲ್ಲೆ ಆರೋಪ : ಪ್ರಕರಣ ದಾಖಲು..!!

May 29, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಸಚಿವ ಸ್ಥಾನ ಸಿಗಲೆಂದು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ವಿಶೇಷ ಪೂಜೆ..!!

ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಸಚಿವ ಸ್ಥಾನ ಸಿಗಲೆಂದು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ವಿಶೇಷ ಪೂಜೆ..!!

May 30, 2026
ಸುಳ್ಯ ಪೊಲೀಸ್ ಠಾಣೆಗೆ ಹೆಡ್ ಕಾನ್ಸ್ಟೇಬಲ್ ಆಗಿ ಸ್ಕರಿಯ ಕರ್ತವ್ಯಕ್ಕೆ ಹಾಜರು..!!

ಸುಳ್ಯ ಪೊಲೀಸ್ ಠಾಣೆಗೆ ಹೆಡ್ ಕಾನ್ಸ್ಟೇಬಲ್ ಆಗಿ ಸ್ಕರಿಯ ಕರ್ತವ್ಯಕ್ಕೆ ಹಾಜರು..!!

May 30, 2026
ಶಿಶಿಲದಲ್ಲಿ ಸಾವಿರಾರು ಮೀನುಗಳ ಮಾರಣ ಹೋಮ ; ಕಾಪರ್ ಸಲ್ಫೇಟ್ ಬಳಸಿ ಮೀನು ಹಿಡಿಯಲು ಯತ್ನ..!!

ಶಿಶಿಲದಲ್ಲಿ ಸಾವಿರಾರು ಮೀನುಗಳ ಮಾರಣ ಹೋಮ ; ಕಾಪರ್ ಸಲ್ಫೇಟ್ ಬಳಸಿ ಮೀನು ಹಿಡಿಯಲು ಯತ್ನ..!!

May 30, 2026
ಮುಳಿಯ ಬೆಂಗಳೂರಿನಲ್ಲಿ “ಡೈಮಂಡ್ ಫೆಸ್ಟ್” – ಅತ್ಯಾಕರ್ಷಕ ಉಡುಗೊರೆಗಳನ್ನು ಗೆಲ್ಲುವ ಅವಕಾಶ..!

ಮುಳಿಯ ಬೆಂಗಳೂರಿನಲ್ಲಿ “ಡೈಮಂಡ್ ಫೆಸ್ಟ್” – ಅತ್ಯಾಕರ್ಷಕ ಉಡುಗೊರೆಗಳನ್ನು ಗೆಲ್ಲುವ ಅವಕಾಶ..!

May 30, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.