ಕಡಬ : ಜಾಗದ ವಿಚಾರವಾಗಿ ಎರಡು ತಂಡಗಳ ಮಧ್ಯೆ ವಾಗ್ವಾದ ನಡೆದು ಈ ಬಗ್ಗೆ ಇತ್ತಂಡಗಳು ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ಬಳ್ಪ ನಿವಾಸಿ ಚಂದ್ರಯ್ಯ ಆಚಾರ್ಯ (55) ನೀಡಿದ ದೂರಿನ ಮೇರೆಗೆ ಭರತ್ ಗೌಡ, ಭರತ್ ಗೌಡ ರವರ ಪತ್ನಿ ಜಯಶ್ರೀ ವಿರುದ್ಧ ಪ್ರಕರಣ ದಾಖಲಾಗಿದೆ.
ಚಂದ್ರಯ್ಯ ಆಚಾರ್ಯ ರವರಿಗೆ ಬಳ್ಪ ಗ್ರಾಮದಲ್ಲಿ ಕೃಷಿ ಜಾಗವಿದ್ದು, ಅದರಲ್ಲಿ ಕೃಷಿಯನ್ನು ಹೊಂದಿರುತ್ತಾರೆ. ಸದ್ರಿ ಸ್ಥಳದಲ್ಲಿ ಭರತ್ ಗೌಡ ಮತ್ತು ಅವರ ಪತ್ನಿ ಆ.8 ರಂದು ಮಧ್ಯಾಹ್ನ ಸದರಿ ಕೃಷಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ 3 ಅಡಿಕೆ ಗಿಡಗಳನ್ನು ಕಿತ್ತು ಬಿಸಾಡಿ ಕೃಷಿಯನ್ನು ಹಾನಿ ಮಾಡಿ, ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸದರಿ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ : 57/2023 ಕಲಂ:447,427,506 ಜೊತೆಗೆ 34 ಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಇನ್ನೊಂದು ತಂಡದ ದೂರು :
ಕಡಬ ಬಳ್ಪ ಗ್ರಾಮದ ನಿವಾಸಿ ಭರತ್ ಗೌಡ ರವರು ನೀಡಿದ ದೂರಿನಂತೆ ಆರೋಪಿಗಳಾದ ಚಂದ್ರಯ್ಯ ಆಚಾರ್ಯ ಅವರ ಇಬ್ಬರು ಮಕ್ಕಳು, ಬಾಲಕೃಷ್ಣ ಆಚಾರಿ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.
ಭರತ್ ಗೌಡ ರವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮಾನಸಿಕ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ : 58/2023 ಕಲಂ:447, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.