ಬಂಟ್ವಾಳ : ವ್ಯಕ್ತಿಯೋರ್ವರ ಮೊಬೈಲ್ ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಜೀಪ ನಡು ನಿವಾಸಿ ಕಿಶೋರ್ ಕುಮಾರ್ ನೀಡಿದ ದೂರಿನ ಮೇರೆಗೆ ಪಲ್ಲಮಜಲು ನಿವಾಸಿ ಅಜಿತ್ (ಶರತ್ ) ವಿರುದ್ಧ ಪ್ರಕರಣ ದಾಖಲಾಗಿದೆ.
ಕಿಶೋರ್ ಎಂಬವರಿಗೆ ಶರತ್ ಎಂಬವರು ಕರೆ ಮಾಡಿ ಕಿಶೋರ್ ಹಾಗೂ ಅವರ ತಂದೆ-ತಾಯಿಗೆ ಅವ್ಯಾಚವಾಗಿ ಬೈದು ಜೀವ ಬೆದರಿಕೆ ಹಾಕಿದ್ದು, ಹಾಗೂ ಕಿಶೋರ್ ಪತ್ನಿಗೆ ಸೇರಿದ ಪಲ್ಲಮಜಲಿನಲ್ಲಿರುವ ಜಮೀನಿನಲ್ಲಿ ಇರುವ ಅಡಿಕೆ ಸಸಿಗಳನ್ನು ಕಡಿದು ನಾಶ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕಲಂ: 504, 506, 427 ಐಪಿಸಿ ಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ..