ವಿಟ್ಲ : ತೀಯಾ ಸ್ನೇಹವಾಹಿನಿ ಒಕ್ಕೂಟ ಆಯೋಜಿಸಿದ್ದ ಕಂಡೊದ ಕೆಸರ್ಡ್ ಕುಸಲ್ದ ಗೊಬ್ಬುಲು, ಆಟಿದ ಅಟ್ಟಿಲ್ದ ಪಂತೋ ಕಾರ್ಯಕ್ರಮಕ್ಕೆ ತೀಯಾ ಸಮಾಜದ ಬಂಧು ಭಗೀನಿಯರು ನೀಡಿದ ಧನಸಹಾಯದಲ್ಲಿ ಕಾರ್ಯಕ್ರಮದ ವೆಚ್ಚ ಕಳೆದು ಉಳಿಕೆಯ ಹಣದಲ್ಲಿ ದಿ. ರಾಮಬೆಳ್ಚಾಡ ಮೂಡಾಯಿಬೆಟ್ಟು ಮತ್ತು ದಿ. ದೇವಕಿ ಯವರ ಪುತ್ರ ಹುಟ್ಟು ಅಂಗವೈಕಲ್ಯದಿಂದ ಬಳಲುತ್ತಿರುವ 44 ವರ್ಷ ಪ್ರಾಯದ ರಾಜೇಂದ್ರ ಪ್ರಸಾದ್ ರವರಿಗೆ ಒಕ್ಕೂಟದ ಮುಖೇನ ಆಚಾರ ಪಟ್ಟವರಾದ ಗೋಪಾಲ ಬೆಳ್ಚಪ್ಪಾಡ ರವರು ಸ್ನೇಹವಾಹಿನಿಯ ಪ್ರಥಮ ಸೇವೆಯಾಗಿ ರೂ 10001 ಅನ್ನು ನೀಡಿದರು.

ಈ ವೇಳೆ ತೀಯಾ ಸ್ನೇಹವಾಹಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.