ನಮಾಜ್ ಎನ್ನುವುದು ಸಂಸ್ಕೃತ ಪದವಂತೆ. ಈ ಕುರಿತ ಮಾಹಿತಿಯೊಂದನ್ನು ಮುಸ್ಲಿಂ ಧರ್ಮ ಗುರುಗಳೊಬ್ಬರು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದು, ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಆಧ್ಯಾತ್ಮ ಭಾವವನ್ನು ವೃದ್ಧಿಗೊಳಿಸಿ ಆತ್ಮಶುದ್ಧಿಗಾಗಿ ಮುಸ್ಲಿಮರು ಪ್ರತಿದಿನ 5 ಬಾರಿ ನಮಾಜ್ ಮಾಡುತ್ತಾರೆ. ಹೆಚ್ಚಿನವರು ಈ ನಮಾಜ್ ಎಂಬ ಪದ ಉರ್ದು ಭಾಷೆಯಿಂದ ಬಂದಿರಬಹುದು ಅಂತ ಭಾವಿಸಿರುತ್ತಾರೆ. ಆದ್ರೆ ನಿಮ್ಗೊತ್ತಾ ನಮಾಜ್ ಎಂಬುದು ಸಂಸ್ಕೃತ ಪದ. ಈ ಕುರಿತ ಮಾಹಿತಿಯನ್ನು ಮುಸ್ಲಿಂ ಧರ್ಮ ಗುರುಗಳೊಬ್ಬರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸಂದರ್ಶನವೊಂದರಲ್ಲಿ ಅಖಿಲ ಭಾರತ ಇಮಾಮ್ ಸಂಘದ ಮುಖ್ಯಸ್ಥ ಡಾ. ಇಮಾಮ್ ಉಮರ್ ಇಲ್ಯಾಸಿ ಅವರು ನಮಾಜ್ ಎಂಬುದು ಸಂಸ್ಕೃತ ಪದ ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ. ಅವರು ಹೇಳುತ್ತಾರೆ, ನಮಾಜ್ ಎಂಬ ಪದದ ಮೂಲ ಭಾರತದ್ದು, ಅದು ಸಂಸ್ಕೃತ ಪದವಾದ ನಮಃ ದಿಂದ ಬಂದಿದೆ. ಅದರ ಅರ್ಥ ಈಶ್ವರನಿಗೆ ತಲೆ ಬಾಗಿ ನಮಸ್ಕರಿಸುವುದು ಅಂತಾ. ಅರಬ್ ದೇಶದವರಿಗೆ ನಮಾಜ್ ಎಂಬ ಪದದ ಬಗ್ಗೆ ಗೊತ್ತಿಲ್ಲ. ಅವರು ಪ್ರಾರ್ಥನೆಗೆ ಸಲಾಹ್ ಎಂದು ಹೇಳುತ್ತಾರೆ ಎಂಬುದನ್ನು ವಿವರಿಸಿದ್ದಾರೆ.
ಈ ಕುರಿತ ಇಂಟೆರೆಸ್ಟಿಂಗ್ ವಿಡಿಯೋವನ್ನು religionworld ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಜುಲೈ 9 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ.