ಬಂಟ್ವಾಳ : ಫರಂಗಿಪೇಟೆಯಲ್ಲಿ ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ಆಟೋ ರಿಕ್ಷಾವೊಂದು ಡಿಕ್ಕಿ ಹೊಡೆದು ಕೇರಳ ಕಣ್ಣೂರು ಮೂಲದ ಮಹಿಳೆ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಮೂಲತಃ ಕೇರಳ ಕಣ್ಣೂರಿನ ಮುಂಡಯ ಪರಂಬೂರು ನಿವಾಸಿ ಪ್ರಸ್ತುತ ಪಡೀಲ್ ರೈಲು ನಿಲ್ದಾಣ ಬಳಿಯ ವಿಜಯನಗರದಲ್ಲಿ ನೆಲೆಸಿರುವ ವಿಸ್ಮಯ ಸಿ.ಎಂ. ಘಟನೆಯಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.
ಮಹಿಳೆ ರಸ್ತೆ ದಾಟಲು ನಿಂತಿದ್ದ ವೇಳೆ ಮಂಗಳೂರು ಕಡೆಗೆ ತೆರಳುವ ಆಟೋ ರಿಕ್ಷಾವನ್ನು ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.