ಉತ್ತರ ಪ್ರದೇಶ : ಎಂಜಲಿನಿಂದ ಮುಖಕ್ಕೆ ಮಸಾಜ್ ಮಾಡಿದ್ದ ಕ್ಷೌರಿಕನ ಸಲೂಲ್ನನ್ನು ಕನೌಜ್ ಜಿಲ್ಲಾಡಳಿತ ನೆಲಕ್ಕುರುಳಿಸಿದೆ.
ಉತ್ತರ ಪ್ರದೇಶದ ಕನೌಜ್ನ ಸಲೂನ್ವೊಂದರಲ್ಲಿ ಕ್ಷೌರಿಕ ಯೂಸುಫ್ ತನ್ನ ಎಂಜಲು ಬಳಸಿ ಗ್ರಾಹಕರೊಬ್ಬರ ಮುಖಕ್ಕೆ ಮಸಾಜ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ವೀಡಿಯೋ ವೈರಲ್ ಆದ ಬಳಿಕ ಕ್ಷೌರಿಕ ಯೂಸುಫ್ ಸಲೂನ್ ಬಿಟ್ಟು ಓಡಿ ಹೋಗಿದ್ದ, ಕೊನೆಗೂ ಆತನನ್ನು ಬಂಧಿಸಲಾಗಿದೆ.
ಆತನ ಸಲೂನ್ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದ್ದು, ನೆಲಕ್ಕುರುಳಿಸಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಯೂಸುಫ್ ವಿರುದ್ಧ ಪ್ರತಿಭಟನೆ ನಡೆಸಿ ಆತನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
ಈ ವೀಡಿಯೋವನ್ನು 15 ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಸ್ವತಃ ತಾನೇ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ.