ಪುತ್ತೂರು : ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜು ಉಪ್ಪಿನಂಗಡಿ ಇಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ಕರಾಟೆ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡವು ಸಮಗ್ರಪ್ರಶಸ್ತಿಯನ್ನು ಪಡೆದಿರುತ್ತದೆ.
ಬಾಲಕರ ವಿಭಾಗದಲ್ಲಿ ದ್ವಿತೀಯ ವಿಜ್ಞಾನವಿಭಾಗದ ಅದ್ವಿತ್‌ಶರ್ಮ, ದುರ್ಗೇಶ್‌ಮೌರ್ಯ, ದ್ವಿತೀಯ ವಾಣಿಜ್ಯವಿಭಾಗದ ಸೃಜನ್‌ಲಕ್ಕಪ್ಪ, ಪ್ರಥಮವಾಣಿಜ್ಯ ವಿಭಾಗದ ಪ್ರಮಥ್ ಎಮ್. ಭಟ್, ರಾಮಪ್ರಸಾದ್‌ಬಿಎನ್, ಪ್ರಥಮವಿಜ್ಞಾನ ವಿಭಾಗದ ರಿಷಿ ಬೆಳ್ಳಿಯ ಪದಕಗಳಿಸಿರುತ್ತಾರೆ.
ಬಾಲಕಿಯರ ವಿಭಾಗದಲ್ಲಿ ವಾಣಿಜ್ಯವಿಭಾಗದ ಸಂಪನ್ನಲಕ್ಷ್ಮಿ ಹಾಗೂ ದೃತಿ, ದ್ವಿತೀಯ ವಿಜ್ಞಾನ ವಿಭಾಗದ ಸಾತ್ವಿಬಿ.ಕೆ, ದ್ವಿತೀಯ ಕಲಾವಿಭಾಗದ ತೃಪ್ತಿ ಎಕೆ, ಪ್ರಥಮ ವಾಣಿಜ್ಯವಿಭಾಗದ ಪ್ರಾಪ್ತಿ ಶೆಟ್ಟಿ ಚಿನ್ನ ದಪದಕವನ್ನು ಪಡೆದು ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ನೇತೃತ್ವದಲ್ಲಿ ಮಾರ್ಗದರ್ಶನವನ್ನು ಪಡೆದಿರುತ್ತಾರೆ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.