ಕಡಬ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡ ವತಿಯಿಂದ ಐತ್ತೂರು ಗ್ರಾಮದ ಅಂತಿಬೆಟ್ಟು ಎಂಬಲ್ಲಿ ಮೂಲ ಸೌಕರ್ಯ ವಂಚಿತ ಕುಟುಂಬದ ಮನೆಯೊಂದಕ್ಕೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷದ್ ನ ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯ, ಕಡಬ ಪ್ರಖಂಡ ಅದ್ಯಕ್ಷರಾದ ರಾಧಕೃಷ್ಣ ಕೊಲ್ಪೆ, ಪ್ರಖಂಡ ಸಂಯೋಜಕ ಮೂಲಚಂದ್ರ ಕಾಂಚನ, ಕಾರ್ಯದರ್ಶಿ ಪ್ರಮೋದ್ ನಂದುಗುರಿ, ಉಪಾದ್ಯಕ್ಷರಾದ ಸಂತೋಷ್ ಕುಮಾರ್ ಕಡಬ ,ಸುರೇಶ್ ಕಡಬ, ಪ್ರಮುಖರಾದ ಜಯಂತ ಕಲ್ಲುಗುಡ್ಡೆ, ಉಮೇಶ್ ಸಾಯಿರಾಮ್ ಐತ್ತೂರು ಘಟಕದ ಅದ್ಯಕ್ಷರಾದ ನವೀನ್ ಕಲ್ಲಾಜೆ, ಚೇತನ್ ಅಂತಿಬೆಟ್ಟು, ಅಜೀತ್ ಕಡಬ ಮುಂತಾದವರು ಉಪಸ್ಥಿತರಿದ್ದರು.