ಕಲ್ಲಡ್ಕ : ವಿಶ್ವದ ಅತಿ ದೊಡ್ಡ ಉಚಿತ ಲಸಿಕಾ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ ತಾಲೂಕಿನ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಜಿ ವೀರಕಂಭದಲ್ಲಿ ದ.ಕ.ಜಿ.ಪಂ.ಮತ್ತು ಜಿಲ್ಲಾ ಆರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ವಿಟ್ಲ, ಹಾಗೂ ಗ್ರಾಮ ಪಂಚಾಯತ್ ವೀರಕಂಭ ಹಾಗೂ ಕೋವಿಡ್ ಟಾಸ್ಕ್ ಫೋರ್ಸ್ ವೀರಕಂಭ ಇದರ ಸಹಯೋಗದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕಾ ಕಾರ್ಯಕ್ರಮವೂ ಜೂ.21 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ವೀರಕಂಭ ಗ್ರಾಮ ವ್ಯಾಪ್ತಿಯ 239 ಮಂದಿ ಲಸಿಕೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ವಿಟ್ಲ ಸಮುದಾಯ ಆರೋಗ್ಯಕೇಂದ್ರದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಇಂದಿರಾ ನಾಯ್ಕ, ಕಿರಿಯ ಆರೋಗ್ಯ ಸಹಾಯಕಿಯರಾದ ಜ್ಯೋತಿ ಕೆ ಎನ್, ಸೌಮ್ಯ ಪಿ, ವೆರೋನಿಕಾ ರೋಡ್ರಿಗಸ್ ,ಕೀತಿ೯ ಕೆ ಎನ್, ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ದಿನೇಶ್,ಗ್ರಾಮ ಪಂಚಾಯತ್, ಸದಸ್ಯರಾದ ಸದಸ್ಯ ರಾದ ಶ್ರೀಮತಿ ಮೀನಾಕ್ಷಿ, ಜಯಂತಿ ಜನಾರ್ಧನ, ಗೀತಾ,ಜಯಶೀಲ ಗಂಭೀರ್,ಜಯಪ್ರಸಾದ್, ಸಂದೀಪ್,ಆಶಾ ಕಾರ್ಯಕರ್ತೆಯರಾದ, ಲೀಲಾವತಿ, ಕೋಮಲಾಕ್ಷಿ, ಸ್ನೇಹಲತಾ, ಶಶಿಕಲಾ, ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರಾದ ನಾರಾಯಣ ಪೂಜಾರಿ ಎಸ್ ಕೆ ತಿಮ್ಮಪ್ಪ ನಾಯ್ಕ ಶ್ರೀಮತಿ ಸಂಗೀತ ಶರ್ಮ ಉಪಸ್ಥಿತರಿದ್ದರು.