ಕಡಬದ ಸಂತೆಕಟ್ಟೆ ಬಳಿ ಯುವಕ ಮತ್ತು ಯುವತಿಯ ನಡುವೆ ನಡೆದ ಸಣ್ಣ ಜಗಳವೊಂದು ಕಾರಿನ ಕೀ ಚರಂಡಿ ಸೇರುವಂತೆ ಮಾಡಿದ ಘಟನೆ ನಡೆದಿದೆ ಎನ್ನಲಾಗಿದೆ. ವಾಗ್ವಾದದ ವೇಳೆ ಯುವತಿ ಕೋಪಗೊಂಡು ಕಾರಿನ ಕೀಯನ್ನು ಚರಂಡಿಗೆ ಎಸೆದಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೀ ಕಳೆದುಹೋದ ಕಾರಣ ಯುವಕ ಸ್ಥಳೀಯರ ನೆರವಿನೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ಈ ವೇಳೆ ಸ್ಥಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ಕೀ ಹುಡುಕಾಟದ ದೃಶ್ಯಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ.


























