ಅಡುಗೆ ಮಾಡುವ ಸಂದರ್ಭ ಬೆಂಕಿ ತಗುಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿಯಿಂದ ವರದಿಯಾಗಿದೆ. ಬೆಳ್ಳಿಪ್ಪಾಡಿ ಹಳೆಮನೆ ಜಯಂತಿ (54) ಎಂಬವರು ಮನೆಯಲ್ಲಿ ಒಬ್ಬರೇ ವಾಸವಿದ್ದರು.
ಅ. 10 ರಂದು ಅವರ ಸಹೋದರ ದೂರವಾಣಿ ಕರೆ ಮಾಡಿದಾಗ ಜಯಂತಿಯವರು ಕರೆ ಸ್ವೀಕರಿಸದೇ ಇದ್ದುದರಿಂದ, ಪಕ್ಕದ ಮನೆಯವರಿಗೆ ವಿಷಯ ತಿಳಿಸಿದರು. ಪಕ್ಕದ ಮನೆಯವರು ಜಯಂತಿಯವರ ಮನೆಗೆ ಹೋಗಿ ನೋಡಿದಾಗ ಅವರು ಬೆಂಕಿ ತಾಗಿ ಮೃತಪಟ್ಟಿರುವುದು ಗೊತ್ತಾಯಿತು.
ಮನೆಯ ಹಿಂಭಾಗದಲ್ಲಿ ಕೊಟ್ಟಿಗೆಯಲ್ಲಿ ಅಡುಗೆ ಮಾಡುವ ಸಂದರ್ಭ ಬೆಂಕಿ ತಾಗಿದ ಘಟನೆ ನಡೆದು ಮೃತಪಟ್ಟಿರಬಹುದೆಂದು ಹೇಳಲಾಗಿದೆ.



























