ಪುತ್ತೂರು: ಟೀಮ್ ಕಲ್ಲೆಗ ಟೈಗರ್ಸ್ (ರಿ.) ಪುತ್ತೂರು ಇದರ ವತಿಯಿಂದ ನವರಾತ್ರಿಯ ಪ್ರಯುಕ್ತ ಅಕ್ಟೋಬರ್ 16ರಂದು ಪುತ್ತೂರಿನಲ್ಲಿ ಹುಲಿವೇಷ ಪ್ರದರ್ಶನ ಗೊಳ್ಳಲಿದ್ದು ಅ.15 ರಂದು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿ ಊದು ಪೂಜೆ ನಡೆಯಲಿದೆ.
ಅಕ್ಟೋಬರ್ 15ರಂದು ಸಂಜೆ 5 ಗಂಟೆಯಿಂದ ಕಲ್ಲೇಗದಿಂದ ಸುಧಾನ ಶಾಲೆಯ ಮೈದಾನದವರೆಗೆ ಜಂಡೆ ಮೆರವಣಿಗೆ ನಡೆಯಲಿದ್ದು, ಸಂಜೆ 7 ಗಂಟೆಯಿಂದ ಸುಮಾರು 10 ಸಾವಿರ ಜನ ಸೇರಬಹುದಾದ ಸುದಾನ ಶಾಲಾ ಮೈದಾನದಲ್ಲಿ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಊದು ಪೂಜೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ನಟ ವಿನಯ್ ರಾಜ್ ಕುಮಾರ್ , ಖ್ಯಾತ ಕಂಟೆಂಟ್ ಕ್ರಿಯೇಟರ್ ಎಸ್ ಜಿ ಮಲೆನಾಡು ಸಹಿತ ಹಲವು ಗಣ್ಯರು ಆಗಮಿಸಲಿದ್ದಾರೆ.
ಅಕ್ಟೋಬರ್ 16ರಂದು ಬೆಳಗ್ಗೆ 10 ಗಂಟೆಯಿಂದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನಕ್ಕೆ ಮೆರವಣಿಗೆಯಲ್ಲಿ ಬಂದು ಪುತ್ತೂರಿನ ವಿವಿಧ ಕಡೆಗಳಲ್ಲಿ ಹುಲಿವೇಷ ಪ್ರದರ್ಶನ ನಡೆಯಲಿದೆ
ಎಂದು ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮದ ಅಂಗವಾಗಿ ಹುಲಿವೇಷ ತಂಡಗಳ ಪ್ರದರ್ಶನ, ಸಭಾ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ವೈಭವಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಕಲ್ಲೇಗ ಟೈಗರ್ಸ್ ತಂಡದ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.



























