ವಿಟ್ಲ: ಭಾರತ ನೂರು ಕೋಟಿ ಉಚಿತ ಕೋವಿಡ್ ಲಸಿಕೆ ನೀಡಿರುವ ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಕೊಳ್ತಿಗೆ ಘಟಕದ ಕಾರ್ಯಕರ್ತರು ಪೆರ್ಲಂಪಾಡಿಯ ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ವಿದ್ಯುತ್ ದೀಪಾಲಂಕಾರಗೊಳಿಸಿ ಚಂದಗಾಣಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲದ ಉಪಾಧ್ಯಕ್ಷರಾದ ಶೋಭಿತ್ ಕೆಮ್ಮಾರ, ಬಿಜೆಪಿ ಯುವ ಮೋರ್ಚಾ ನರಿಮೊಗರು ಮಹಾಶಕ್ತಿ ಕೇಂದ್ರದ ಪ್ರ.ಕಾರ್ಯದರ್ಶಿಯಾದ ಮಂಜುನಾಥ್ ದುಗ್ಗಳ, ಕೊಳ್ತಿಗೆ ಬಿಜೆಪಿ ಯುವ ಮೋರ್ಚಾದ ಪ್ರಮುಖರುಗಳಾದ ಅಶೋಕ್ ಅರಿಕ್ಕಿಲ, ಪ್ರಶಾಂತ್ ಬಾಯಂಬಾಡಿ, ಕಾರ್ತಿಕ್ ಬರಡಿಮಜಲು ಹಾಗೂ ಇತರರು ಉಪಸ್ಥಿತರಿದ್ದರು. ಕೊಳ್ತಿಗೆ ಶಕ್ತಿ ಕೇಂದ್ರದ ಪ್ರಮುಖರು ಸಹಕರಿಸಿದರು.