ಪುತ್ತೂರು: ಅನ್ಸಾರುದ್ದೀನ್ ಜುಮಾ ಮಸೀದಿ ವ್ಯಾಪ್ತಿಯಲ್ಲಿ ಬರುವ ಮೊಹಲ್ಲಾ ಕಮಿಟಿಗಳಲ್ಲಿ ಖಾಝಿ ನೇಮಕ ಮಾಡುವ ಬಗ್ಗೆ ಇದ್ದ ಗೊಂದಲಗಳು ಮತ್ತು ಸಂಶಯಗಳಿಗೆ ತೆರೆ ಎಳೆಯಲಾಗಿದೆ. ಅ.29 ರಂದು ಪುತ್ತೂರಿನ ಬದ್ರಿಯಾ ಜುಮಾ ಮಸೀದಿ ಸಭಾಂಗಣದಲ್ಲಿ ಸಮಸ್ತದ ಅಧ್ಯಕ್ಷರು ಹಾಗೂ ಧಾರ್ಮಿಕ ಮುಖಂಡರಾದ ಜಿಫ್ರಿ ಮುತ್ತುಕೋಯ ತಂಙಳ್‌ರವರು ಪುತ್ತೂರು ಹಾಗೂ ಸುತ್ತಮುತ್ತಲಿನ ಖಾಝಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸೈಯದ್‌ಮಲೆ ಜುಮಾ ಮಸೀದಿ ಅಧ್ಯಕ್ಷ, ನ್ಯಾಯವಾದಿ ನೂರುದ್ದೀನ್ ಸಾಲ್ಮರ ಹೇಳಿದರು.
ಪುತ್ತೂರು ಖಾಝಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಗೊಂದಲಗಳಿತ್ತು. ಎಲ್ಲಾ ಗೊಂದಲಗಳನ್ನು ಪುತ್ತೂರಿನ ಮುದರ್ರಿಸ್ ಹಾಗೂ ಮುಖಂಡರಾದ ಸೈಯದ್ ಅಹ್ಮದ್ ಪೂಕೋಳ ತಂಙಳ್ ಮತ್ತು ಸಾಲ್ಮರ ಜುಮಾ ಮಸೀದಿಯ ಖತೀಬರಾದ ಅಲ್‌ಹಾಜ್ ಉಮರ್ ದಾರಿಮಿಯವರ ನೇತೃತ್ವದಲ್ಲಿ ಮಾತುಕತೆ ನಡೆಸಿ ನಿವಾರಿಸಲಾಗಿದೆ.
ಅ.29ರಂದು ಪುತ್ತೂರಿನ ಬದ್ರಿಯಾ ಜುಮಾ ಮಸೀದಿ ಸಭಾಂಗಣದಲ್ಲಿ ಸಮಸ್ತದ ಅಧ್ಯಕ್ಷರು, ಮುಖಂಡರಾದ ಜಿಫ್ರಿ ಮುತ್ತುಕೋಯ ತಂಙಳ್ ಅವರು ಪುತ್ತೂರು ಹಾಗೂ ಸುತ್ತಮುತ್ತಲಿನ ಖಾಝಿ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸೈಯದ್‌ಮಲೆ ಜುಮಾ ಮಸೀದಿ ಉಪಾಧ್ಯಕ್ಷ ಇಸ್ಮಾಯಿಲ್ ಸಾಲ್ಮರ, ಕೋಶಾಧಿಕಾರಿ ಮಹಮ್ಮದ್ ಕೋಲ್ಪೆ, ಸದಸ್ಯ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.