ವಿಟ್ಲ: ಜಿಲ್ಲಾ ಲಯನ್ಸ್ ರಾಜ್ಯಪಾಲರಾದ ಲ. ವಸಂತ್ ಕುಮಾರ್ ಶೆಟ್ಟಿ ದಂಪತಿಗಳು ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಮಾ.17 ರಂದು ಆಗಮಿಸಲಿದ್ದಾರೆ.
ಅನೇಕ ಉದ್ಘಾಟನಾ ಕಾರ್ಯಕ್ರಮ, ಸೇವಾ ಚಟುವಟಿಕೆಗಳಲ್ಲಿ ಅವರು ಭಾಗವಹಿಸಲಿದ್ದು, ಸಂಜೆ ನೀರಕಣಿಯಲ್ಲಿರುವ ಜೆ.ಎಲ್. ಆಡಿಟೋರಿಯಂನಲ್ಲಿ ಸಭಾ ಕಾರ್ಯಕ್ರಮ, ಗಣ್ಯರಿಗೆ ಸನ್ಮಾನ ನಡೆಯಲಿದೆ ಎಂದು ವಿಟ್ಲ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಸಂದೇಶ್ ಶೆಟ್ಟಿ ಬಿಕ್ನಾಜೆ ಹಾಗೂ ಲಯನ್ಸ್ ಪ್ರಾಂತೀಯ ಸಲಹೆಗಾರ ಸುದರ್ಶನ್ ಪಡಿಯಾರ್, ಗೈಡಿಂಗ್ ಲಯನ್ಸ್ ಸತೀಶ್ ಕುಮಾರ್ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.