ಬೆಳ್ತಂಗಡಿ: ಮೆದುಳಿನಲ್ಲಿ ರಕ್ತಸ್ರಾವ ಆಗಿ ಮೆದುಳು ನಿಷ್ಕ್ರಿಯಗೊಂಡ ಕಾರಣ ಸಾವನ್ನಪ್ಪಿದ ಆರ್ .ಎಸ್. ಎಸ್. ಕಾರ್ಯಕರ್ತ ಶಿಶಿಲ ಸೂರ್ಯನಾರಾಯಣ ರಾವ್ (44) ರವರ ಅಂಗಾಂಗ ದಾನ ಮಾಡಲಾಯಿತು.
ಎ.30 ರಂದು ಸೂರ್ಯನಾರಾಯಣ್ ರಾವ್ ಅವರನ್ನು ಮಂಗಳೂರಿನ ಡಾ ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೆದುಳು ನಿಷ್ಕ್ರಿಯಗೊಂಡಿತ್ತು.
ಕುಟುಂಬದವರ ಒಪ್ಪಿಗೆಯಂತೆ ನಿನ್ನೆ ಅಂಗಾಂಗ ದಾನ ಪ್ರಕ್ರಿಯೆ ನಡೆಯಿತು. ಈ ಮೂಲಕ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಅಂಗಾಂಗವನ್ನು ಝೀರೋ ಟ್ರಾಫಿಕ್ ಮುಖೇನ ಆಸ್ಪತ್ರೆಗಳಿಗೆ ರವಾನಿಸಲಾಗಿತ್ತು. ಅಂಗಾಂಗ ದಾನ ಪ್ರಕ್ರಿಯೆಗೆ ಮಣಿಪಾಲ ಸಮೂಹ ಸಂಸ್ಥೆಯ ಕೆಎಂಸಿ ಮಂಗಳೂರು, ಮಣಿಪಾಲ ಹಾಗೂ ಬೆಂಗಳೂರು ಆಸ್ಪತ್ರೆಯ ನುರಿತ ತಜ್ಞರು ಹಾಗೂ ಎ.ಜೆ. ಆಸ್ಪತ್ರೆಯ ವೈದ್ಯರ ತಂಡ ಸಹಕರಿಸಿತ್ತು.