ಪುತ್ತೂರು: ಬಪ್ಪಳಿಗೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬೀಳ್ಕೊಡುಗೆ ಸಮಾರಂಭ ನಡೆಯಿತು.

ವೇದಿಕೆಯಲ್ಲಿ ಬಾಲವಿಕಾಸ ಸಮಿತಿ ಸದಸ್ಯರು, ನಗರ ಸಭಾ ಮಾಜಿ ಸದಸ್ಯರು ಹಾಗೂ ಆದರ್ಶ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯರಾದ ಸ್ವರ್ಣಲತಾ ಹೆಗ್ಡೆ, ಜನ್ಮ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಹರ್ಷ ಕುಮಾರ್ ರೈ, ಆಲಿ ಬಪ್ಪಳಿಗೆ, ಆದರ್ಶ ಸ್ತ್ರೀ ಶಕ್ತಿ ಸ್ವಸಹಾಯ ಅಧ್ಯಕ್ಷರಾದ ವನಜಾ, ಶ್ರೀ ಮಂಜುನಾಥ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಲಲಿತಾ ಹಾಗೂ ಮಕ್ಕಳ ಪೋಷಕರ ಪರವಾಗಿ ಶೀಲಾವತಿ ರವರು ಉಪಸ್ಥಿತರಿದ್ದರು.
ಆದರ್ಶ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರಾದ ಗುಲಾಬಿಯವರು ಸ್ವಾಗತಿಸಿ, ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಇರುವಂತಹ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ಮಾತೃ ಪೂರ್ಣ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ, ಪೋಷಣ್ ಅಭಿಯಾನ ಹಾಗೂ ಬೇಟಿ ಬಚಾವೋ ಬೇಟಿ ಪಡವೋ ಯೋಜನೆಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ ಹರೀಶ್ ರವರು ಮಾಹಿತಿ ನೀಡಿದರು.

ಕಾರ್ಯಕ್ರಮದ ಕೇಂದ್ರ ಬಿಂದುವಾದ ಬೀಳ್ಕೊಡುಗೆ ಮಕ್ಕಳಿಗೆ ಶುಭ ಹಾರೈಕೆಯೊಂದಿಗೆ ಪುಸ್ತಕ, ಪೆನ್ಸಿಲ್ ಹಾಗೂ ರಬ್ಬರ್ ಮತ್ತು ಅಂಗನವಾಡಿ ಕೇಂದ್ರದ ಎಲ್ಲಾ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ವೆಂಕಟೇಶ್ ರವರು ಕೊಡುಗೆಗಳನ್ನು ನೀಡಿದರು.

ಅಂಗನವಾಡಿ ಕೇಂದ್ರದ ಮಕ್ಕಳು 2 ಚಯರ್ ನ್ನು ಹಾಗೂ ಭಾರತ ಮಾತೆಯ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿದರು. 2021-22 ಸಾಲಿನ ಪುಟಾಣಿಗಳ ಪೋಷಕರು ಕಿಚನ್ ಸಿಂಕ್ ನ್ನು ಕೊಡುಗೆಯಾಗಿ ನೀಡಿದರು. ಡಾ. ಹರ್ಷ ಕುಮಾರ್ ರವರು ಟೇಬಲ್ ಫ್ಯಾನ್ ಅನ್ನು ಕೊಡುಗೆಯಾಗಿ ನೀಡಿದರು.

ಸಹಾಯಕಿ ಪ್ರೇಮ, ಪೋಷಕರಾದ ಗೀತಾ, ಲಲಿತಾ, ಸುಶೀಲ, ಆಯಿಷಾ ಬಿಬಿ, ನಳಿನಿ, ನಳಿನಾಕ್ಷಿ, ಲತಾ, ವೇದಾವತಿ ಸಹಕರಿಸಿದರು. ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕಿ ಪ್ರೇಮಾ ಧನ್ಯವಾದ ಸಮರ್ಪಿಸಿದರು.

