ಪುತ್ತೂರು: ತಾಜಾ ತರಕಾರಿ, ಹಣ್ಣುಗಳು, ಜ್ಯೂಸ್ ಹಾಗೂ ಸಾಂಪ್ರದಾಯಿಕ ತಿಂಡಿಗಳು ಒಂದೇ ಸೂರಿನಡಿಯಲ್ಲಿ ದೊರೆಯುವ ‘insta basket’ ಮಳಿಗೆಯೂ ಮೇ.16 ರಂದು ಬೊಳ್ವಾರು-ಪುತ್ತೂರು ಮುಖ್ಯರಸ್ತೆಯ ಪ್ರಗತಿ ಆಸ್ಪತ್ರೆಯ ಬಳಿ ಶುಭಾರಂಭಗೊಳ್ಳಲಿದೆ.
ನೂತನ ಮಳಿಗೆಯನ್ನು ಸಚಿವರಾದ ವಿ. ಸುನೀಲ್ ಕುಮಾರ್ ರವರು ಉದ್ಘಾಟನೆಗೊಳಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ರವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷರಾದ ಜೀವಂಧರ್ ಜೈನ್, ಪುಡಾ ಅಧ್ಯಕ್ಷರಾದ ಭಾಮಿ ಅಶೋಕ್ ಶೆಣೈ, ನಗರಸಭೆ ಅಧ್ಯಕ್ಷ ಜಗನ್ನಿವಾಸ್ ರಾವ್, ಇನ್ ಸ್ಟಾ ಬಾಸ್ಕೆಟ್ ಇಂಡಿಯಾ ಪ್ರೈ. ಲಿ. ನಿರ್ದೇಶಕರಾದ ಯತೀಶ ಕೆ. ಎಸ್. ರವರು ಆಗಮಿಸಲಿದ್ದಾರೆ.
ಉತ್ತಮ ಗುಣಮಟ್ಟದ ತಾಜಾ ತರಕಾರಿ, ಹಣ್ಣು-ಹಂಪಲುಗಳು, ಸಾಂಪ್ರದಾಯಿಕ ತಿಂಡಿ-ತಿನಸುಗಳು, ದಿನಸಿ ಸಾಮಾಗ್ರಿಗಳು, ಚಾಟ್ಸ್ ಹಾಗೂ ಇನ್ನಿತರ ವಸ್ತುಗಳು ಒಂದೇ ಸೂರಿನಡಿ ಗ್ರಾಹಕರಿಗೆ ಕೈ ಗೆಟುಕುವ ದರದಲ್ಲಿ ಲಭ್ಯವಾಗಲಿದೆ ಎಂದು ಮಳಿಗೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
