ಮಂಗಳೂರು: ವ್ಯಕ್ತಿಯೊಬ್ಬರು ಇನ್ ಸ್ಟಾಗ್ರಾಮ್‌ನಲ್ಲಿ ಐ ಪೋನ್ ಆರ್ಡರ್ ಮಾಡಿ ಸುಮಾರು 66,000 ರೂ.ವನ್ನು ಕಳೆದುಕೊಂಡು ವಂಚನೆಗೊಳಗಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ವ್ಯಕ್ತಿಯೊಬ್ಬರು GADGET FACTORY ಎಂಬ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಆನ್‌ಲೈನ್‌ನಲ್ಲಿ ಮೊಬೈಲ್ ಖರೀದಿ ಮಾಡುವ ಬಗ್ಗೆ ಬಂದ ಮಾಹಿತಿ ನೋಡಿ ಅದಕ್ಕೆ ಮೆಸೇಜ್ ಮಾಡಿದ್ದರು. ಸಂದೇಶ ನೋಡಿ ಬಳಿಕ ಗೂಗಲ್ ಪೇ ವಾಟ್ಸಾಪ್ ನಂಬರ್ ಕಳುಹಿಸಲಾಗಿತ್ತು.
ಅದನ್ನು ನಂಬಿದ ಈ ವ್ಯಕ್ತಿ ಹೊಸ ಮೊಬೈಲ್ ಬುಕ್ ಮಾಡಿ ಮಾ.13ರಿಂದ 17ರ ಮಧ್ಯೆ ಹಂತ ಹಂತವಾಗಿ 66,000 ರೂವನ್ನು ಕೆನರಾ ಬ್ಯಾಂಕ್ ಮತ್ತು ಕರ್ಣಾಟಕ ಬ್ಯಾಂಕ್ ಖಾತೆಯಿಂದ ಟ್ರಾನ್ಸ್‌ಫರ್ ಮಾಡಿದ್ದರು.
ಮೊಬೈಲ್ ಖರೀದಿಗಾಗಿ ಆನ್‌ಲೈನ್ ಪೇಮೆಂಟ್ ಮಾಡಿದರೂ ಕೂಡಾ ಹಣವನ್ನೂ ಮರಳಿಸದೆ ಮೊಬೈಲನ್ನೂ ನೀಡದೆ ವಂಚಿಸಿದ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.